AUDIO -ಅಮಿತ್ ಶಾ ದೊಡ್ಡ ರೌಡಿ ಜನಾಭಿಪ್ರಾಯ ಇಲ್ಲದಿದ್ದರು ಸರ್ಕಾರ ನಮ್ಮದೆ : ಬಿಜೆಪಿ MLC ಯೋಗೇಶ್ವರ್ ಆಡಿಯೋ ವೈರಲ್
ಬೆಂಗಳೂರು : ಅಮಿತ್ ಶಾ ರೌಡಿ ಇದ್ದಂಗೆ, ಮುಂದಿನ ಚುನಾವಣೆಯಲ್ಲಿ ಯಾವುದೇ ಪಕ್ಷದ ಜೊತೆ ಹೊಂದಾಣಿಕೆ ಬೇಡ ಎಂದು ನೇರವಾಗಿ ಹೇಳಿದ್ದಾರೆ. ಜನಾಭಿಪ್ರಾಯ ಸಿಗದಿದ್ದರು ನಮ್ಮದೇ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂಬ ವಿಚಾರ ಮಾತನಾಡಿರುವ ಆಡಿಯೋ ಸಧ್ಯ ವೈರಲ್ ಆಗಿದೆ.
ಬಿಜೆಪಿ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಪಿ ಯೋಗೇಶ್ವರ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಒಂದು ಸಧ್ಯ ವೈರಲ್ ಆಗಿದ್ದು ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಜೊತೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಕುರಿತು ಅನೇಕ ವಿಷಯಗಳ ಕುರಿತು ಈ ಆಡಿಯೋದಲ್ಲಿ ಸ್ಪಷ್ಟವಾಗಿದೆ.
ಮುಂಬರುವ ಚುನಾವಣೆಯಲ್ಲಿ ನಮಗೆ ಜನಾದೇಶ ಬರಸಿದ್ದರು ಸರ್ಕಾರ ಮಾಡಿತ್ತೇವೆ. ಈ ಬಾರಿ ಚುನಾವಣೆ ನಂತರ ಆಪರೇಷನ್ ಮಾಡಲ್ಲ, ಚುನಾವಣೆ ಮುಂಚೆ ಆಪರೇಷನ್ ಮಾಡುತ್ತೇವೆ ಎಂದು ಆಡಿಯೋದಲ್ಲಿ ಹೇಳಿದ್ದಾರೆ.