Video – ಸುಡುವ ಶವಗಳ ಮಧ್ಯೆ ನಿಂತು ಸಂವಾದ ಮಾಡಿದ ಕನಕ ಗುರುಪೀಠದ ಶ್ರೀ
ವಾರಾಣಸಿ : ಕಾಶಿ ಹಿಂದೂಗಳ ಪವಿತ್ರ ಕ್ಷೇತ್ರ. ಇಲ್ಲಿನ ವಿಸ್ಮಯಕಾರಿ ಸಂಗತಿಗಳು ಜಗತ್ತಿನ ಕುತೂಹಲ ಹೆಚ್ಚಿಸುವುದರಲ್ಲಿ ಎರಡು ಮಾತಿಲ್ಲ. ಸಧ್ಯ ಕನಕ ಗುರುಪೀಠದ ನಿರಂಜನಾನಂದಪುರಿ ಶ್ರೀಗಳು ಮಾಡಿದ ಸಂವಾದ ಎಂತವರನ್ನು ಮಂತ್ರಮುಗ್ಧಗೊಳಿಸುತ್ತದೆ.
ಇತ್ತಿಚ್ಚಿಗೆ ಅಯೋಧ್ಯೆ ರಾಮ ಮಂದಿರದಲ್ಲಿ ಬಾಲರಾಮನ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ತೆರಳಿದ್ದ ನಿರಂಜನಾನಂದಪುರಿ ಶ್ರೀಗಳು ಹಾಗೆಯೇ ವಾರಾಣಸಿಯ ಕಾಶಿ ವಿಶ್ವನಾಥನ ದರ್ಶನ ಪಡೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಕಾಶಿಯ ಗಂಗಾ ನದಿ ಪಕ್ಕದಲ್ಲಿ ಸಂಚಾರ ಮಾಡಿದ್ದಾರೆ.
ಕಾಶಿಯ ಪವಿತ್ರ ಗಂಗಾ ನದಿ ಪಕ್ಕದಲ್ಲಿರುವ ಅನೇಕ ಘಾಟ್ ಗಳ ಪೈಕಿ ಪ್ರಮುಖವಾದ ಮಣಿಕರ್ಣಿಕಾ ಘಾಟ್ ಗೆ ಭೇಟಿ ನೀಡಿರುವ ವೀಡಿಯೋ ತುಣುಕನ್ನು ಶ್ರೀಗಳು ಹಂಚಿಕೊಂಡಿದ್ದಾರೆ. ಇಲ್ಲಿ ಶವ ಸಂಸ್ಕಾರ ಮಾಡುವುದೇ ದೊಡ್ಡ ಜಾತ್ರೆಯಂತೆ ನಡೆಯುತ್ತದೆ. ಒಂದೇ ಸಲ 50 ಕ್ಕೂ ಅಧಿಕ ಶವ ಸಂಸ್ಕಾರವನ್ನು ಮಾಡಲಾಗುತ್ತದೆ.
ಈ ಶವಗಳನ್ನು ಸುಡುವ ಸಂದರ್ಭದಲ್ಲಿ ಶ್ರೀಗಳು ಲೈವ್ ಮೂಲಕ ಚಿತ್ರೀಕರಣ ಮಾಡಿದ್ದು ಅನೇಕ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿನ ವಿಶೇಷ ಆಚರಣೆಗಳ ಕುರಿತು ನಿರಂಜನಾನಂದಪುರಿ ಶ್ರೀಗಳು ಮಾಹಿತಿ ನೀಡಿದ್ದಾರೆ.
ಒಟ್ಟಿನಲ್ಲಿ ಹಲವು ವಿಸ್ಮಯಕಾರಿ ಸಂಘತಿಗಳನ್ನು ತನ್ನ ಒಡಲಿನೊಳಗೆ ಇಟ್ಟುಕೊಂಡ ಭಾರತದ ಪವಿತ್ರ ಯಾತ್ರಾ ಸ್ಥಳಗಳಲ್ಲಿ ಒಂದಾದ ಕಾಶಿಯನ್ನು ಎಷ್ಟೇ ವರ್ಣಿಸಿದರು ಸಾಲದು.