Video : ಯಾಕೆ ಹಿಂಗ್ ಮಾತಾದ್ಬಿಟ್ರು ಲಕ್ಷಣ ಸವದಿ….? ಆ ಮಾತಿಗೆ ರೈತರ ಆಕ್ರೋಶ
ಅಥಣಿ : ಮಾತಿನ ಚತುರ ಎಂದೇ ಕರಿಸಿಕೊಳ್ಳುವ ಮಾಜಿ ಡಿಸಿಎಂ ಹಾಗೂ ಅಥಣಿ ಮಾಜಿ ಶಾಸಕರು ಆಡಿದ ಆ ಒಂದು ಮಾತು ಸಧ್ಯ ಸ್ವ ಕ್ಷೇತ್ರದ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ವಿಜಯಪುರ ಜಿಲ್ಲೆಯ ನಾಗಠಾಣಾ ಗ್ರಾಮದ ಭಾಷಣದಲ್ಲಿ ನಡೆದ ಕಾರ್ಯಕ್ರಮದ ಭಾಷಣ ಮಾಡುತ್ತಿದ್ದ ವೇಳೆ, ಅಥಣಿಯಲ್ಲಿನ ನಾಲ್ಕು ಕೆರೆ ಕಡಿಮೆ ಮಾಡಿ ವಿಜಯಪುರ ಜಿಲ್ಲೆಯ ನಾಗಠಾಣ ಸುತ್ತಲೂ ಕೆರೆ ನಿರ್ಮಿಸಲು ಜಲಸಂಪನ್ಮೂಲ ಸಚಿವರಾಗೆ ಹೇಳಿದ ಆ ಒಂದು ಮಾತಿಗೆ ರೈತರು ಆಕ್ರೋಶ ಹೊರಹಾಕಿದ್ದಾರೆ.
ನಿಮ್ಮ ರಾಜಕೀಯ ಏನೆ ಮಾಡಿಕೊಳ್ಳಿ ಅಥಣಿ ತಾಲೂಕಿನ ಬಗ್ಗೆ ಮಾತನಾಡಬೇಡಿ ಎಂದು ರೈತ ಮುಖಂಡರು ಆಕ್ರೋಶ ಹೊರಹಾಕಿದ್ದಾರೆ.