
ಭೀಕರ ರಸ್ತೆ ಅಪಘಾತ ; ಪ್ರಜಾವಾಣಿ ವರದಿಗಾರ ಸೇರಿ ಇಬ್ಬರು ಸಾವು

ರಾಯಚೂರು : ತೆಲಂಗಾಣದಲ್ಲಿ ಮಂಗಳವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕು ಪ್ರಜಾವಾಣಿ ವರದಿಗಾರ ಬಸವರಾಜ ನಂದಿಕೋಲಮಠ ಸೇರಿ ಇಬ್ಬರು ಸ್ಥಳದಲ್ಲೇ ಸಾವಣಪ್ಪಿರುವ ಘಟನೆ ನಡೆದಿದೆ.
ಅಪಘಾತದಲ್ಲಿ ಪ್ರಜಾವಾಣಿ ವರದಿಗಾರ ಬಿ.ಎ ನಂದಿಕೋಲಮಠ ( 58 ) ಲಿಂಗಸಗೂರಿನ ಜಂಗಮಮೂರ್ತಿ ( 67 ) ಸ್ಥಳದಲ್ಲೇ ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಲಿಂಗಸೂಗೂರು ನಿವಾಸಿಗಳಾದ ಆರು ಜನ ತೆಲಂಗಾಣದ ಕೊಲನುಪಾಕ ಗ್ರಾಮದ ಸ್ವಯಂಭೂ ಸೋಮೇಶ್ವರ ಸ್ವಾಮಿ ದೇವಸ್ಥಾನಕ್ಕೆ ತೆರಳಿ ಹಿಂದಿರುಗುವಾಗ ಮೆಹಬೂಬ್ ನಗರದ ಗೋಪಾಲಾಪುರಂ ಬಳಿ 167 ರಾಷ್ಟ್ರೀಯ ಹೆದ್ದಾರಿಯಲ್ಲಿ ಎರ್ಟಿಗಾ ಕಾರು ಮತ್ತು ಟಿಪ್ಪರ್ ನಡುವೆ ಅಪಘಾತ ಸಂಭವಿಸಿದೆ.
ಬಿ.ಎ ನಂದಿಕೋಲಮಠ ಅವರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ. ಮೃತರ ಅಂತ್ಯಕ್ರಿಯೆ ಲಿಂಗಸುಗೂರಿನಲ್ಲಿ ಬುಧವಾರ ಮಧ್ಯಾಹ್ನ ನೆರವೇರಲಿದೆ.