
ಬೈಲಹೊಂಗಲ : ತಿಗಡಿ ಹಿರೇಮಠದಲ್ಲಿ ಕಳ್ಳತನ

ಬೈಲಹೊಂಗಲ : ತಾಲೂಕಿನ ತಿಗಡಿ ಹಿರೇಮಠದ ಶ್ರೀ ಶಿವಬಸಪ್ಪ ಅಜ್ಜನವರ ಮಠದಲ್ಲಿ ಕಳ್ಳತನ ನಡೆದಿದೆ.
ಮಠದ ಒಳಗಿದ್ದ ಗದ್ದುಗೆಗೆ ಹಾಕಿದ್ದ ಅಪಾರ ಬಂಗಾರ ಹಾಗೂ ಬೆಳ್ಳಿ ಆಭರಣ ಕಳ್ಳತನ ಮಾಡಿ ಆರೋಪಿಗಳು ಪರಾರಿ ಆಗಿದ್ದಾರೆ.
ಬೆಳ್ಳಿಯ ದೇವರ ಮೂರ್ತಿ, ನಂದಿ, ಬೆತ್ತ, ಗುಂಡಗಡಿಗೆ, ಸೇರಿದಂತೆ ಇನ್ನಿತರ ಬೆಳ್ಳಿಯ ಆಭರಣ ಕಳ್ಳತನವಾಗಿವೆ.
ಸ್ಥಳಕ್ಕೆ ಬೈಲಹೊಂಗಲ ಸಿಪಿಐ ಪಂಚಾಕ್ಷರಿ ಸಾಲಿಮಠ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.