
ಹಾರಿಹೋಯ್ತು ಆಸೀಫನ ಪಾರಿವಾಳ :ಮಹಿಳೆ ಪರಾರಿ

ಬೆಳಗಾವಿ : ವಿವಾಹಿತ ಮಹಿಳೆಯೊಬ್ಬಳು ತನ್ನ ಇಬ್ಬರು ಮಕ್ಕಳನ್ನು ಕರೆದುಕೊಂಡು ಗಂಡನನ್ನು ಯಾಮಾರಿಸಿ ಮನೆ ಬಿಟ್ಟು ಸ್ನೇಹಿತನ ಜೊತೆ ಓಡಿಹೋದ ಘಟನೆ ಬೆಳಗಾವಿ ತಾಲೂಕಿನ ಮಾರಿಹಾಳ ಗ್ರಾಮದಲ್ಲಿ ಕಳೆದ ಬುಧವಾರ ನಡೆದಿದೆ.
ಮೂಲತಃ ಖಾನಾಪುರದ ಆಸೀಫ್ ಸೈಯದ್ ಎಂಬ ವ್ಯಕ್ತಿ ಚಾಲಕ ವೃತ್ತಿ ಮಾಡಿಕೊಂಡು ಬೆಳಗಾವಿಯಲ್ಲಿ ವಾಸವಿದ್ದ. ಈತನ ಪತ್ನಿ ಮಾಸಾಬೀ ಸೈಯದ್ ಕಳೆದ ಬುಧವಾರ ರಾತ್ರಿ ತನ್ನ ಇಬ್ಬರು ಮಕ್ಕಳೊಂದಿಗೆ ಮನೆಯಲ್ಲಿದ್ದ ವಸ್ತುಗಳ ಜೊತೆ ಪರಾರಿಯಾಗಿದ್ದಾರೆ.
ಗಂಡ ಆಸೀಫ್ ತಾನು ಗಳಿಸಿದ್ದ ಆಸ್ತಿಯನ್ನು ಪತ್ನಿ ಹೆಸರಿಗೆ ಮಾಡಿದ್ದ. ಆಸ್ತಿ ಪತ್ರ, ಮನೆಯಲ್ಲಿದ್ದ ಬಂಗಾರದ ಒಡವೆ, ಹಾಗೂ ಸಿಲಿಂಡರ್ ಸೇರಿದಂತೆ ಕಾರು ಸಮೇತ ಸ್ನೇಹಿತ ಬಸವರಾಜ ಸೀತಿಮನಿ ಜೊತೆ ಮನೆಬಿಟ್ಟು ಹೋದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಈ ಕುರಿತು ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಖಲಾಗಿದೆ.
2017 ರಲ್ಲಿ ಆಸೀಫ್ ಮತ್ತು ಮಾಸಾಬಿ ಮದುವೆಯಾಗಿದ್ದು ಎರಡು ಮಕ್ಕಳಿವೆ. ಅಷ್ಟೇ ಅಲ್ಲದೆ ಆರೋಪಿ ಬಸವರಾಜ ಈತನ ಜೊತೆ ಕೆಲಸ ಮಾಡುತ್ತಿದ್ದ. ಜೊತೆಗಿದ್ದ ಸ್ನೇಹಿತನೇ ತನ್ನ ಹೆಂಡತಿಯನ್ನು ಅಪಹರಣ ಮಾಡಿರುವುದಾಗಿ ಆಸೀಫ್ ಪ್ರಕರಣ ದಾಖಲಿಸಿದ್ದಾನೆ. ಒಟ್ಟಿನಲ್ಲಿ ಕೂಡಿಟ್ಟ ಆಸ್ತಿಯಿಂದ ಹಿಡಿದು ತಾಳಿ ಕಟ್ಟಿದ ಹೆಂಡತಿಯೇ ಕೈ ಕೊಟ್ಟು ಹೋಗಿದ್ದು, ಪ್ರೀತಿಯ ಪಾರಿವಾಳ ಹಾರಿ ಹೊಯ್ತು ಗೆಳೆಯ ಅಂತಾಗಿದೆ ಆಸೀಫ್ ಪರಿಸ್ಥಿತಿ.
ಆರೋಪಿ ಪತ್ನಿ ಗ್ರಾಮ ಪಂಚಾಯತಿ ಸದಸ್ಯೆ : ಬಸವರಾಜ್ ಸೀತಮನಿ ಎಂಬಾತ ಮಗನ ಜೊತೆಗೆ ಸ್ನೇಹಿತಮ ಹೆಂಡತಿಯೊಂದಿಗೆ ಎಸ್ಕೇಪ್ ಆಗಿದ್ದರಿಂದ ಮಾರಿಹಾಳ ಗ್ರಾಮ ಪಂಚಾಯತಿ ಸದಸ್ಯೆ ವಾಣಿಶ್ರೀ ಕುಟುಂಬ ಕಂಗಾಲಾಗಿದ್ದಾರೆ. ಗಂಡ ಓಡಿ ಹೋದ ಬೆನ್ನಲ್ಲೇ ತಿಳಿದು ಆತನ ಫೋಟೊಗಳಿಗೆ ಮಸಿ ಬಳಿದ ಹೆಂಡತಿ. ಅಲ್ಬಮ್ ನಲ್ಲಿರುವ ಗಂಡನ ಎಲ್ಲಾ ಫೋಟೊಗಳಿಗೆ ಮಸಿ ಬಳಿದ ಹೆಂಡತಿ ವಾಣಿಶ್ರೀ. ಒಂದು ವಾರದ ಹಿಂದೇ ಇದೇ ಗ್ರಾಮದ ಮಾಸಾಬಿ ಸೈಯದ್ ಎಂಬಾಕೆ ಜೊತೆಗೆ ಪರಾರಿಯಾಗಿದ್ದ.
ಹಲವು ಬಾರಿ ಗಂಡ ಬಸವರಾಜ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ವಾಣಿಶ್ರೀ ಮನವಿ ಮಾಡಿದ್ದರು. ಪೊಲೀಸರು ಮೊದಲೇ ಕ್ರಮ ವಹಿಸಿದ್ದರೆ ಗಂಡ ಓಡಿ ಹೋಗ್ತಿರಲಿಲ್ಲ ಎಂದ ಹೆಂಡತಿ ಅಳಲು ತೋಡಿಕೊಂಡಿದ್ದಾರೆ. ವಾಣಿಶ್ರೀಗೆ ಮೂರು ಮಕ್ಕಳಿದ್ದು ಒಂದು ಮಗನನ್ನ ಕರೆದುಕೊಂಡು ಹೋಗಿರುವ ಗಂಡ ಬಸವರಾಜ್. ಗಂಡ ಹೋಗಲಿ ನನ್ನ ಮಗ ಬೇಕು ತಂದು ಕೊಡಿ ಅಂತಾ ಹೆಂಡತಿ ಪೊಲೀಸರಿಗೆ ಒತ್ತಾಯ ಮಾಡಿದ್ದಳೆ.
ಎಂಟು ವರ್ಷದ ಹಿಂದೆ ಬಸವರಾಜ್ ಜೊತೆಗೆ ಮದುವೆಯಾಗಿದ್ದ ವಾಣಿಶ್ರೀ. ಗಂಡ ಹೇಳದೇ ಕೇಳದೇ ಪರಿಸ್ತ್ರೀ ಜೊತೆಗೆ ಓಡಿ ಹೋಗಿದ್ದಕ್ಕೆ ಕಂಗಾಲದ ಹೆಂಡತಿ ಮಕ್ಕಳು. ಇತ್ತ ಮಾಸಾಬಿ ಎರಡು ಮಕ್ಕಳ ಜೊತೆಗೆ ಕಾಣೆಯಾಗಿದ್ದಾಳೆ ಅಂತಾ ಗಂಡ ಆಸೀಫ್ ಸೈಯದ್ ಕೇಸ್ ದಾಖಲಿಸಿದ್ದಾರೆ. ಮಾರಿಹಾಳ ಠಾಣೆಯಲ್ಲಿ ದೂರು ದಾಖಲಿಸಿರುವ ಗಂಡ ಆಸೀಫ್. ಚಿನ್ನಾಭರಣ, ಹಣ, ಕಾರಿನ ಜೊತೆಗೆ ಕಾಣೆಯಾಗಿದ್ದಾಳೆ ಅಂತಾ ನಾಲ್ಕು ಕೇಸ್ ಹಾಕಿದ್ದು, ಮಾರಿಹಾಳ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.