
ಕ್ರೀಡಾಂಗಣದಲ್ಲಿ ತರಕಾರಿ ಬೆಳೆಯುತ್ತಿರುವ ಪಾಕಿಸ್ತಾನ, ಇವರ ಪರಿಸ್ಥಿತಿ ನೋಡಿ ನಕ್ಕ ನೆಟ್ಟಿಗರು

ಖಾನೆವಲ್ : ಒಂದು ಕಾಲದಲ್ಲಿ ಜಗತ್ತಿನ ಶ್ರೇಷ್ಠ ಕ್ರಿಕೆಟ್ ತಂಡದಲ್ಲಿ ಒಂದಾಗಿದ್ದ ಪಾಕಿಸ್ತಾನದ ಸಧ್ಯದ ಪರಿಸ್ಥಿತಿ ನೋಡಿದರೆ ಮರುಕ ಹುಟ್ಟುತ್ತದೆ. ಕ್ರಿಕೆಟ್ ಆಟದಲ್ಲಿ ಮಿಂಚುತ್ತಿದ್ದ ಈ ದೇಶ, ಕ್ರೀಡಾಂಗಣದಲ್ಲಿ ತರಕಾರಿ ಬೆಳೆಯುತ್ತಿರುವುದು ವಿಪರ್ಯಾಸ.
ಹೌದು ಕೋಟ್ಯಾಂತರ ರೂ ಕರ್ಚುಮಾಡಿ ಪಂಜಾಬ್ ಪ್ರಾಂತ್ಯದ ಖಾನೆವಲ್ ನಲ್ಲಿ ನಿರ್ಮಿಸಲಾಗಿದ್ದ ಮೈದಾನದಲ್ಲಿ ಆಡಿದ್ದ ಅದೆಷ್ಟೋ ಪ್ರತಿಭೆಗಳು ಅಂತರಾಷ್ಟ್ರೀಯ ತಂಡದಲ್ಲಿ ಗುರುತಿಸಿಕೊಂಡಿದ್ದರು. ಆದರೆ 2009 ರಲ್ಲಿ ನಡೆದ ಆ ಒಂದು ಘಟನೆ ನಂತರ ಇಲ್ಲಿ ಯಾವುದೇ ಪಂದ್ಯಗಳ ನಿಯೋಜನೆ ಮಾಡಲಾಗಿಲ್ಲ. ಕ್ರಿಕೆಟ್ ನಡೆಯದೆ ಬರಡಾಗಿದ್ದ ಈ ಕ್ರೀಡಾಂಗಣವನ್ನು ಸಧ್ಯ ಪಾಕಿಸ್ತಾನಿಗಳು ಆಕ್ರಮಿಸಿಕೊಂಡಿದ್ದು ಕೃಷಿ ಚಟುವಟಿಕೆ ಕೈಗೊಂಡಿದ್ದಾರೆ.
2009 ರಲ್ಲಿ ನಡೆದಿತ್ತು ಭಯಾನಕ ಘಟನೆ : ಕ್ರಿಕೆಟ್ ಇತಿಹಾಸದಲ್ಲೇ ಕರಾಳ ದಿನ : ಅಂದು ಪಾಕಿಸ್ತಾನದ ವಿರುದ್ಧದ ಕ್ರಿಕೆಟ್ ಪಂದ್ಯ ಆಡಲು ಶ್ರೀಲಂಕಾ ತಂಡ ಆಗಮಿಸಿತ್ತು. ಈ ಸಂದರ್ಭದಲ್ಲಿ ಕ್ರೀಡಾಂಗಣಕ್ಕೆ ತೆರಳುವ ಮಧ್ಯೆ ಲಷ್ಕರ್ – ಇ – ಜಾಂಗ್ವಿ ಉಗ್ರಗಾಮಿ ಸಂಘಟನೆ ಸದಸ್ಯರು ಆಟಗಾರರ ಮೇಲೆ ಬಂದೂಕಿನ ಸುರಿಮಳೆಗೈದಿದ್ದರು. ಈ ಸಂದರ್ಭದಲ್ಲಿ ಶ್ರೀಲಂಕಾ ತಂಡದ ಮಾಜಿ ನಾಯಕ ಮಹೇಲಾ ಜಯವರ್ಧನೆ, ಕುಮಾರ್ ಸಂಗಕ್ಕಾರಾ, ತರಂಗ ಪರನವಿತನ, ಅಜಂತಾ ಮೆಂಡಿಸ್ ಸೇರಿದಂತೆ ತಂಡದ ಭದ್ರತೆಗೆ ನಿಯೋಜಿಸಿದ್ದ ಪಾಕಿಸ್ತಾನಿ ಸೈನಿಕರು ಹಾಗೂ ನಾಗರಿಕರು ಸಾವನಪ್ಪಿದ್ದರು.
ಘಟನೆ ನಂತರದಲ್ಲಿ ಯಾವುದೇ ಸರಣಿಗಳನ್ನು ಪಾಕಿಸ್ತಾನದ ಕ್ರಿಕೆಟ್ ಬೋರ್ಡ್ ಹಮ್ಮಿಕೊಂಡಿರಲಿಲ್ಲ. ಸಧ್ಯ ಈ ಕ್ರೀಡಾಂಗವನ್ನು ಪಾಕಿಸ್ತಾನಿ ರೈತರು ಆಕ್ರಮಿಸಿದ್ದು ಅಲ್ಲಿ ತರಕಾರಿ ಬೆಳೆ ಬೆಳುತ್ತಿದ್ದಾರೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಟೀಕೆಗಳು ವ್ಯಕ್ತವಾಗಿವೆ. ಕ್ರೀಡಾಂಗಣದ ಅವ್ಯವಸ್ಥೆ ಕಂಡು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಕ್ತರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಂಭಂದಿಸಿದ ವೀಡಿಯೋ :