
ಏನ್ ಚೆಂದ ಕಾಣಿಸ್ತದ ನೋಡ ನಮ್ಮ “ಸುವರ್ಣಸೌಧ”

ಬೆಳಗಾವಿ : 75 ನೇ ಸ್ವಾತಂತ್ರ ದಿನಾಚರಣೆ ಅಮೃತ ಮಹೋತ್ಸವವನ್ನು ಇಡೀ ಭಾರತದೇಶ ಆಚರಿಸುತ್ತಿದೆ. ಸರ್ಕಾರಿ ಹಾಗೂ ಖಾಸಗಿ ಕಚೇರಿಗಳು ಬಣ್ಣ ಬಣ್ಣದ ಲೈಟಿಂಗಳಿಂದ ಕಂಗೊಳಿಸುತ್ತಿದ್ದು, ಸಧ್ಯ ಬೆಳಗಾವಿ ಸುವರ್ಣಸೌಧ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ.
ಕೆಸರಿ, ಬಿಳಿ , ಹಸಿರು ಬಣ್ಣಗಳಿಂದ ಕಂಗೊಳಿಸುತ್ತಿರುವ ಬೆಳಗಾವಿ ಸುವರ್ಣಸೌಧದ ಅಂದವನ್ನು ಸವಿಯಲು ಎರಡು ಕಣ್ಣುಗಳು ಸಾಲದು. ಸ್ವಾತಂತ್ರ್ಯೋತ್ಸವದ ಈ ಶುಭ ಸಂದರ್ಭದಲ್ಲಿ ಕುಂದಾನಗರಿಯ ಅಂದವನ್ನು ಬೆಳಗಾವಿ ಸುವರ್ಣಸೌಧ ಹೆಚ್ಚಿಸಿದೆ ಎಂದರೆ ತಪ್ಪಾಗಲಾರದು.
