ಹಜ್ ಯಾತ್ರಿಕರ ಸೋಗಲ್ಲಿ ಪಾಕಿಸ್ತಾನದಿಂದ ಭಿಕ್ಷುಕರು ; ಮುಸ್ಲಿಂ ರಾಷ್ಟ್ರಗಳ ಮುಂದೆ ಪಾಕ್ ಮಾನ ಹರಾಜು
ಸೌದಿ : ಬೇಡವಾದ ವಿಷಯಕ್ಕೆ ಸುದ್ದಿಯಾಗುವ ದೇಶ ಅದು ಪಾಕಿಸ್ತಾನ. ಸಧ್ಯ ಮುಸ್ಲಿಂಮರ ಧಾರ್ಮಿಕ ಕೆಂದ್ರ ಸೌದಿ ಅರೇಬಿಯಾದ ಪವಿತ್ರ ಸ್ಥಳ ಮೆಕ್ಕಾದಲ್ಲಿ ಪಾಕಿಸ್ತಾನಿಯರೇ ತಲೆನೋವಾಗಿದ್ದಾರೆ. ದಯವಿಟ್ಟು ಪಾಕಿಸ್ತಾನದಿಂದ ಯಾತ್ರಿಗಳ ವೇಶದಲ್ಲಿ ಭಿಕ್ಷುಕರನ್ನು ಕಳುಹಿಸಬೇಡಿ ಎಂದು ಮನವಿ ಮಾಡಿದೆ.
ಹೌದು ಹಜ್ ಯಾತ್ರೆಯ ನೆಪದಲ್ಲಿ ಸಾಗುವ ಬಹುತೇಕ ಪಾಕಿಸ್ತಾನಿಯರು ಭಿಕ್ಷುಕರು ಹಾಗೂ ಮೆಕ್ಕಾದ ಪವಿತ್ರ ಸ್ಥಳದಲ್ಲಿ ಜೇಬುಗಳ್ಳತನ ಮಾಡುತ್ತಿದ್ದಾರೆ. ಸಧ್ಯ ಇಂತವರು ಸೌದಿ ಸರ್ಕಾರಕ್ಕೆ ದೊಡ್ಡ ತಲೆನೋವಾಗಿದ್ದು, ಈಗಾಗಲೇ ಪಾಕಿಸ್ತಾನಕ್ಕೆ ಸೌದಿ ಮನವಿ ಕೂಡಾ ಮಾಡಿಕೊಂಡಿದೆ.
ವಿಶ್ವಮಟ್ಟದಲ್ಲಿ ಪಾಕಿಸ್ತಾನದ ಮಾನ ಹರಾಜಾಗುತ್ತಿದೆ, ಸ್ವತಃ ಮುಸ್ಲಿಂ ರಾಷ್ಟ್ರಗಳೇ ಪಾಕ್ ವಿರುದ್ಧ ಕಿಡಿಕಾರುತ್ತಿವೆ. ಅರಬ್ ರಾಷ್ಟ್ರಗಳು ನೇರವಾಗಿಯೇ ನಿಮ್ಮ ದೇಶದ ಭಿಕ್ಷುಕರು, ಜೇಬುಗಳ್ಳರನ್ನು ನಮ್ಮ ದೇಶಗಳಿಗೆ ಕಳುಹಿಸಬೇಡಿ ಎಂದು ಹೇಳಿವೆ.
ಹಜ್ ಯಾತ್ರಿಕರ ಸೋಗಿನಲ್ಲಿ ಬಂದು ಇಲ್ಲಿ ಭಿಕ್ಷೆ ಬೇಡುತ್ತಿದ್ದಾರೆ ಎಂದಿರುವ ಅರಬ್ ರಾಷ್ಟ್ರಗಳು ಪಾಕಿಸ್ತಾನದ ಪ್ರಜೆಗಳಿಂದ ನಮ್ಮ ಜೈಲುಗಳು ತುಂಬಿವೆ ಎಂದಿವೆ.
ಉಭಯ ರಾಷ್ಟ್ರಗಳ ವಿದೇಶಾಂಗ ಸಚಿವಾಲಯದ ಅಧಿಕಾರಿಗಳ ನಡುವೆ ನಡೆದ ಸಭೆಯಲ್ಲಿ ಈ ವಿಚಾರವನ್ನು ಸೌದಿ ಅರೇಬಿಯಾದ ಅಧಿಕಾರಿಗಳು ಎತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ನಿಮ್ಮ ದೇಶದ ಭಿಕ್ಷುಕರನ್ನು ಯಾತ್ರಿಕರ ಸೋಗಿನಲ್ಲಿ ನಮ್ಮ ದೇಶಕ್ಕೆ ಕಳುಹಿಸಬೇಡಿ ಎಂದು ಅರಬ್ ರಾಷ್ಟ್ರ ಪಾಕಿಸ್ತಾನಕ್ಕೆ ಹೇಳಿದೆ.
ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ಕೂಡ ಪಾಕ್ ಹೆಚ್ಚಿನ ಭಿಕ್ಷುಕರು ಹಜ್ ಯಾತ್ರೆ ನೆಪದಲ್ಲಿ ವಿದೇಶಕ್ಕೆ ಹೋಗುತ್ತಿದ್ದಾರೆ ಎಂದು ಹೇಳಿದ್ದಾರೆ ಎಂದು ಪಾಕ್‌ನ ಜಿಯೋ ನ್ಯೂಸ್ ವರದಿ ಮಾಡಿದೆ.