Select Page

ಎ ಕಿಡ್ಜ್ ಫ್ರೀ ಸ್ಕೂಲ್ ನಲ್ಲಿ ಸಂಭ್ರಮದ ಗುರುಪೂರ್ಣಿಮೆ ಉತ್ಸವ

ಎ ಕಿಡ್ಜ್ ಫ್ರೀ ಸ್ಕೂಲ್ ನಲ್ಲಿ ಸಂಭ್ರಮದ ಗುರುಪೂರ್ಣಿಮೆ ಉತ್ಸವ

ಬೆಂಗಳೂರು : ವಿದ್ಯೆ ಎಂಬ ಸಾಗರದಲ್ಲಿ ಈಜು ಕಲಿಸಿ ದಡ ಸೇರಿಸುವ ಶಕ್ತಿ ಗುರುವಿಗೆ ಮಾತ್ರ. ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ದೇವರ ಸ್ಥಾನ ನೀಡಿದ್ದು ಇದು ಇಡೀ ಜಗತ್ತಿಗೆ ಮಾದರಿ ಎಂದು ಎ ಕಿಡ್ಜ್ ಫ್ರೀ ಸ್ಕೂಲ್ ಪ್ರಾಂಶುಪಾಲರಾದ ಜೆ.ಎಸ್ ಸಂತೋಷ್ ಅಭಿಪ್ರಾಯಪಟ್ಟರು.

ನಗರದ ಅತ್ತಿಬೆಲೆ ಎ ಕಿಡ್ಜ್ ಫ್ರೀ ಸ್ಕೂಲ್ ನಲ್ಲಿ ಗುರು ಪೂರ್ಣಿಮೆಯ ದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಇವರು. ಮಕ್ಕಳಲ್ಲಿನ ಅಂಧಕಾರ ತೊಡೆದು ಶಿಕ್ಷಣವೆಂಬ ದೀಪ ಬೆಳಗಿಸುವುದೇ ಗುರುವಿನ ಕರ್ತವ್ಯ. ಇಂದಿನ ತಾಂತ್ರಿಕ ಯುಗದಲ್ಲಿ ಗುರು ಮತ್ತು ಶಿಷ್ಯರ ಸಂಬಂಧ ದೂರ ಸಾಗುತ್ತಿದ್ದು ಮತ್ತೆ ಈ ಸಮಾಗಮ ಬೆಸೆಯುವ ಯುಗ ಬರಲಿ ಎಂದರು.

ಈ ಸಂದರ್ಭದಲ್ಲಿ ಮಕ್ಕಳಿಗೆ ಗುರುಪೂರ್ಣಿಮೆ ದಿನದ ಮಹತ್ವದ ಕುರಿತು ಹೇಳಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

Advertisement

Leave a reply

Your email address will not be published. Required fields are marked *

error: Content is protected !!