
ಎ ಕಿಡ್ಜ್ ಫ್ರೀ ಸ್ಕೂಲ್ ಸಂಕ್ರಾಂತಿ ಸಂಭ್ರಮ

ಬೆಂಗಳೂರು : ಭಾರತದ ಬೆನ್ನೆಲುಬಾಗಿರುವ ರೈತ ಸಮಹೂಹಕ್ಕೆ ಹರ್ಷ ತರುವ ಸುಗ್ಗಿ ಹಬ್ಬದ ಸಂಕ್ರಾಂತಿಯ ಮಹತ್ವವನ್ನು ನಮ್ಮ ಮುಂದಿನ ಪೀಳಿಗೆಗೆ ತಿಳಿಸಿಕೊಡುವ ಮಹತ್ವದ ಜವಾಬ್ದಾರಿ ನಮ್ಮ ಮೇಲಿದೆ ಎಂದು ಎ ಕಿಡ್ಜ್ ಫ್ರೀ ಸ್ಕೂಲ್ ಪ್ರಾಂಶುಪಾಲರಾದ ಜೆ.ಎಸ್ ಸಂತೋಷ್ ಅಭಿಪ್ರಾಯಪಟ್ಟರು.
ನಗರದ ಅತ್ತಿಬೆಲೆ ಎ ಕಿಡ್ಜ್ ಫ್ರೀ ಸ್ಕೂಲ್ ನಲ್ಲಿ ಸಂಕ್ರಾಂತಿ ಹಬ್ಬದ ಆಚರಣೆ ನೆರವೇರಿಸಲಾಗಿತ್ತು. ರೈತ ಸಮುದಾಯದ ಬಳಸುವ ಕೃಷಿ ವಸ್ತುಗಳ ಪರಿಚಯ ಮಕ್ಕಳಿಗೆ ಬಾಲ್ಯದಲ್ಲಿ ಸಿಗಬೇಕು ಎಂಬ ಉದ್ದೇಶದಿಂದ ಕೃಷಿ ಬಳಕೆಗೆ ಉಪಯೋಗಿಸುವ ವಸ್ತುಗಳಳನ್ನು ಪ್ರದರ್ಶನ ಮಾಡಲಾಯಿತು.

ಸಾಂಪ್ರದಾಯಿಕ ಉಡುಗೆ ತೊಟ್ಟ ಮಕ್ಕಳು ಸಂಭ್ರಮದಿಂದ ಹಬ್ಬದ ಆಚರಣೆ ಮಾಡಿದರು. ಈ ಸಂದರ್ಭದಲ್ಲಿ ಗೋ ಪೂಜೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು. ಈ ವೇಳೆ ಶಾಲೆಯ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.