ಯೋಗದಿಂದ ಮನಸ್ಸಿಗೆ ನೆಮ್ಮದಿ : ಜೆ.ಎಸ್ ಸಂತೋಷ್
ಬೆಂಗಳೂರು : ಭಾರತೀಯ ಪರಂಪರೆಯಲ್ಲಿ ಯೋಗಕ್ಕೆ ತನ್ನದೇ ಆದ ಪ್ರಾಮುಖ್ಯತೆ ಇದೆ. ಮನಸ್ಸಿನ ನೆಮ್ಮದಿ ಹಾಗೂ ಆರೋಗ್ಯಯುತ ಬದುಕಿಗೆ ಯೋಗ ಅನಿವಾರ್ಯ ಎಂದು ಎ ಕಿಡ್ಜ್ ಫ್ರೀ ಸ್ಕೂಲ್ ಪ್ರಾಂಶುಪಾಲರಾದ ಜೆ.ಎಸ್ ಸಂತೋಷ್ ಅಭಿಪ್ರಾಯಪಟ್ಟರು.
ನಗರದ ಅತ್ತಿಬೆಲೆಯಲ್ಲಿರುವ ಎ ಕಿಡ್ಜ್ ಫ್ರೀ ಸ್ಕೂಲ್ ನಲ್ಲಿ ನಡೆದ ವಿಶ್ವ ಯೋಗದಿನ ಅಂಗವಾಗಿ ನಡೆದ ಕಾರ್ಯಕ್ರಮ ಉದ್ದೇಶಸಿ ಮಾತನಾಡಿದ ಇವರು. ಇಂದಿನ ಒತ್ತಡದ ಬದುಕಿನಲ್ಲಿ ಜನರು ಮಾನಸಿಕ ನೆಮ್ಮದಿಯಿಂದ ದೂರ ಸರಿದಿದ್ದಾರೆ. ಸಮರ್ಪಕ ಯೋಗ ಅಳವಡಿಸಿಕೊಂಡರೆ ಒತ್ತಡ ಬದುಕಿಗೆ ನೆಮ್ಮದಿ ಲಭಿಸುತ್ತದೆ. ಇದೇ ಕಾರಣಕ್ಕೆ ಪಾಶ್ಚಿಮಾತ್ಯ ರಾಷ್ಟ್ರಗಳು ಯೋಗವನ್ನು ಅಳವಡಿಸಿಕೊಂಡಿವೆ ಎಂದರು.
ಯೋಗ ದಿನದ ಅಂಗವಾಗಿ ಶಾಲೆಯ ಪುಟಾಣಿ ಮಕ್ಕಳು ವಿವಿಧ ಆಸನಗಳ ಮೂಲಕ ಗಮನಸೆಳೆದರು. ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು.