ರಾಜ್ಯಕ್ಕೂ ಕಾಲಿಟ್ಟ HMPV ವೈರಸ್ ; ಒಂಬತ್ತು ತಿಂಗಳ ಮಗುವಲ್ಲಿ ಚೀನಿ ವೈರಸ್ ಪತ್ತೆ…?
ಬೆಂಗಳೂರು ; ಕೋವಿಡ್ ಸಾಂಕ್ರಾಮಿಕ ರೋಗದಿಂದ ಜಗತ್ತು ಈಗಷ್ಟೇ ಹೊರಬಂದಿದ್ದು, ಈ ಮಧ್ಯೆ ಇನ್ನೊಂದು ಚೀನಿ ದೇಶದ ವೈರಸ್ ಭಾರತಕ್ಕೆ ಲಗ್ಗೆ ಇಟ್ಟಿದೆ. ಕರ್ನಾಟಕದ ಮಗುವಿನಲ್ಲಿ HMPV ವೈರಸ್ ಪತ್ತೆಯಾಗಿದ್ದು, ಆತಂಕ ಮೂಡಿಸಿದೆ.
ಒಂದು ವರ್ಷವೂ ತುಂಬದ ಮಗುವಿನಲ್ಲಿ HMPV ವೈರಸ್ ಪತ್ತೆಯಾಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಆದರೆ ಈವರೆಗೂ ಮಗುನ ಲ್ಯಾಬ್ ವರದಿಯಿಂದ ಖಚಿತ ಮಾಹಿತಿ ಸಿಕ್ಕಿಲ್ಲ ಎಂದು ತಿಳಿದುಬಂದಿದೆ.
ಹೆಚ್ಎಂಪಿವ್ಹಿ ವೈಸರ್ ರೋಗದ ಗುಣಲಕ್ಷಣಗಳ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಯಾವುದೇ ಖಚಿತ ಮಾಹಿತಿ ಘೋಷಣೆ ಮಾಡಿಲ್ಲ. ಆದರೆ ವೈರಸ್ ವಿಧವನ್ನು ತಿಳಿಯಲು ಕನಿಷ್ಠ ನಾಲ್ಕು ಪರೀಕ್ಷೆ ನಡೆಸಬೇಕಿದ್ದು ಹದಿನೈದು ದಿನ ಕಾಯಬೇಕಿದೆ.
ಸಧ್ಯ ಈ ಪ್ರಕರಣದ ಕುರಿತು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತ ಪ್ರತಿಕ್ರಿಯೆ ನೀಡಿದ್ದು. HMPV ವೈರಸ್ ಕುರಿತು ಜನ ಆತಂಕಪಡುವ ಅವಶ್ಯಕತೆ ಇಲ್ಲ. ರೋಗದ ಗುಣಲಕ್ಷಣ ಪತ್ತೆ ಹಚ್ಚಿ ಚಿಕಿತ್ಸೆಗೆ ತರಾರಿ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.