Select Page

Advertisement

ಕುಮಾರಕೃಪಾ ನಂಟಿನ ಕುರಿತು ಕಾಂಗ್ರೆಸ್ ನಾಯಕಿ ನವ್ಯಶ್ರೀ ಬಿಚ್ಚಿಟ್ಟ ಸತ್ಯ

ಕುಮಾರಕೃಪಾ ನಂಟಿನ ಕುರಿತು ಕಾಂಗ್ರೆಸ್ ನಾಯಕಿ ನವ್ಯಶ್ರೀ ಬಿಚ್ಚಿಟ್ಟ ಸತ್ಯ

ಬೆಳಗಾವಿ : ತೋಟಗಾರಿಕೆ ಇಲಾಖೆಯ ಅಧಿಕಾರಿ ರಾಜಕುಮಾರ ಟಾಕಳೆ ವಿರುದ್ಧ ಹನಿಟ್ರ್ಯಾಪ್ ಕೇಸ್ ಸೇರಿದಂತೆ ನನಗೆ ಅನ್ಯಾಯ ಮಾಡಿರುವ ಕುರಿತು ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಿದ್ದೇನೆ ಎಂದು ಕಾಂಗ್ರೆಸ್ ಯುವ ನಾಯಕಿ ನವ್ಯಶ್ರೀ ರಾವ್ ಹೇಳಿದರು.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಸಾಮಾಜಿಕ ಜಾಲತಾಣದಲ್ಲಿ ನನಗೆ ಸಂಬಂಧಿಸಿದ ವಿಡಿಯೋ, ಫೋಟೊ ವೈರಲ್ ಆಗುತ್ತವೆ. ನಾನು ಆಗ ವಿದೇಶದಲ್ಲಿ ಇದೆ. ಭಾರತಕ್ಕೆ ಬಂದ ನಂತರ ನಾನು ಎಲ್ಲ ಪರಿಶೀಲನೆ ನಡೆಸಿ ದೂರು ಕೊಡುವ ಸಂದರ್ಭದಲ್ಲಿ ರಾಜಕುಮಾರ ಟಾಕಳೆ ರಾತ್ರೋರಾತ್ರಿ ಎಪಿಎಂಸಿಗೆ ಹೋಗಿ ದೂರು ನೀಡುತ್ತಾರೆ. ನಾನು ಹನಿಟ್ರ್ಯಾಪ್ ಮಾಡಿದ್ದೇನೆ ಎಂದು ದೂರು ನೀಡಿದ್ದಾರೆ ಎಂದರು.

ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಹಾಗೂ ರಾಷ್ಟ್ರೀಯ ನಾಯಕರ ಫೋಟೋ ಇಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಹಾಗೂ ಅಪಪ್ರಚಾರ ನಡೆಸಿದರು ಎಂದು ದೂರಿದರು.

ರಾಜಕುಮಾರ ಟಾಕಳೆಯಿಂದ ನನಗೆ ಅನ್ಯಾಯವಾಗಿದೆ. ಇತ್ತೀಚೆಗೆ ಬೆಳಗಾವಿಗೆ ಬಂದು ದೂರು ನೀಡುವ ವೇಳೆ ನನ್ನ ಮೇಲೆ ಸಾಕಷ್ಟು ಒತ್ತಡ ಇತ್ತು. ಈಗಾಗಲೇ ನಾನು ಎರಡು‌ ಬಾರಿ ಬೆಳಗಾವಿ ‌ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದೆ ಎಂದರು.

ರಾಜಕುಮಾರ ಟಾಕಳೆಯಿಂದ ನನಗೆ ನೋವು, ಅನ್ಯಾಯವಾಗಿದೆ. ನನ್ನ ಹಾಗೆ ಮತ್ತೊಂದು ಹೆಣ್ಣಿಗೆ
ಮೊದಲನೇ ಪತ್ನಿ ಇದ್ದರೂ ಎರಡನೇ ಮದುವೆಯಾಗಿದ್ದಕ್ಕೆ, ಮಾವಿನ ತೋಪಿನಲ್ಲಿ ನನ್ನ ಕಿಡ್ನಾಪ ಮಾಡಿರುವ ಪ್ರಕರಣ, ಸಾರ್ವಜನಿಕ ಜೀವನದಲ್ಲಿ ನನ್ನ ಮಾನ ತಗೆದಿರುವುದು, ಅಶ್ಲೀಲ್ ವಿಡಿಯೋ ಚಿತ್ರಿಕರಣ ಮಾಡಿಕೊಂಡು ಬೇರೆ ವೆಬ್ ಸೈಟ್ ಗೆ ಮಾರಾಟ ಮಾಡಿರುವ ಕುರಿತು, ಆತನಿಂದ ಆದ ಹನಿಟ್ರ್ಯಾಪ್ ಸೇರಿ ರಾಜಕುಮಾರ ಟಾಕಳೆ ವಿರುದ್ಧ ದೂರು ನೀಡಿ ಪ್ರಕರಣ ದಾಖಲಿಸುತ್ತೇನೆ ಎಂದರು.

ರಾಜಕುಮಾರ ಟಾಕಳೆ ನೀಡಿರುವ ಸುಳ್ಳು ದೂರು ಅದನ್ನು ತೆಗೆದು ಹಾಕಿ ನನಗೆ ನ್ಯಾಯ ಕೊಡಿಸಬೇಕು. ಕುಮಾರಕೃಪಾ ಸರಕಾರಿ ಕಟ್ಟಡವನ್ನು ರಾಜಕುಮಾರ ಯಾವ ರೀತಿ ಬಳಕೆ ಮಾಡಿಕೊಂಡಿದ್ದಾನೆ ಎಂದು ನ್ಯಾಯಲಯದ ಮುಂದೆ ಹೇಳಿದ್ದೇನೆ ಎಂದರು.

ಶುಕ್ರವಾರವೇ ಬೆಳಗಾವಿ ನಗರ ಪೊಲೀಸ್ ಕಮಿಷನರ್ ಗೆ ಮನವಿ ಮಾಡಿದ್ದೇನೆ. ನನಗೆ ನ್ಯಾಯ ಕೊಡಿಸಬೇಕು ಎಂದಾಗ ಡಿಸಿಪಿ ಸ್ನೇಹಾ ಅವರಿಗೆ ತಿಳಿಸುವಂತೆ ಹೇಳಿದರು. ಪೊಲೀಸರಿಗೆ ಸಹಕಾರ ಕೊಡುತ್ತೇನೆ ಎಂದರು.

ಹನಿಟ್ರ್ಯಾಪ್ ಕೇಸ್ ನ್ನು ಹಾಕಲು ರಾಜಕುಮಾರ ಟಾಕಳೆ ಪ್ರೇರಣೆ ನೀಡಿದ್ದಾನೆ. 2020 ಮೇ ತಿಂಗಳಲ್ಲಿ ಬೆಂಗಳೂರಿನ ಕುಮಾರ ಕೃಪಾ ಪ್ರವಾಸಿ ಮಂದಿರದ ಹಿಂಬದಿ ಇರುವ ಗಣೇಶ ದೇವಸ್ಥಾನದಲ್ಲಿ ಮದುವೆಯಾಗಿದ್ದೇವೆ. ಅವನೇ ನನ್ನ ಗಂಡ ಎಂದು ಪುನರುಚ್ಚರಿಸಿದರು.

Advertisement

Leave a reply

Your email address will not be published. Required fields are marked *

error: Content is protected !!