Select Page

Advertisement

ಮಾಹಾನ್ ನಾಯಕ ಕೊಟ್ಟ ಸೀಕ್ರೆಟ್ ಟಾಸ್ಕ್ ನವ್ಯಶ್ರೀಗೆ ಮುಳುವಾಯ್ತಾ…? ಸಾಹುಕಾರ್ ಟೀಂ ಬೆನ್ನುಬಿದ್ದ ಬೇತಾಳ ಈಕೆ….!

ಮಾಹಾನ್ ನಾಯಕ ಕೊಟ್ಟ ಸೀಕ್ರೆಟ್ ಟಾಸ್ಕ್ ನವ್ಯಶ್ರೀಗೆ ಮುಳುವಾಯ್ತಾ…? ಸಾಹುಕಾರ್ ಟೀಂ ಬೆನ್ನುಬಿದ್ದ ಬೇತಾಳ ಈಕೆ….!

ಬೆಳಗಾವಿ : ಅಶ್ಲೀಲ ವೀಡಿಯೋ ಹೊರಬಂದಿರುವ, ಸಧ್ಯ ಹನಿಟ್ರ್ಯಾಪ್ ಸುಳಿಯಲ್ಲಿ ಸಿಲುಕಿರುವ ಚನ್ನಪಟ್ಟಣ ಕಾಂಗ್ರೆಸ್ ಯುವ ನಾಯಕಿಯ ಇತಿಹಾಸ ಕೆದಕಿದಂತೆ, ಅದೆಷ್ಟೋ ಸ್ವಾರಸ್ಯಕರ ವಿಷಯ ಹೊರಬರುತ್ತವೆ. 2019 ರ ಸಮ್ಮಿಶ್ರ ಸರ್ಕಾರ ಪತನದ ಹಿಂದೆ ಅದೆಷ್ಟೋ ಕಾಣದ ಕೈಗಳು ಕೆಲಸ ಮಾಡಿದ್ದವು ಎಂಬುದು ಈ ವರದಿಯಿಂದ ತಮಗೆ ಮನವರಿಕೆಯಾಗುತ್ತದೆ.

ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರ ಬೀಳುವ ಸಂದರ್ಭದಲ್ಲಿ ಈ ಕಾಂಗ್ರೆಸ್ ಯುವ ನಾಯಕಿ ನವ್ಯಶ್ರೀ ಆರ್ ರಾವ್ ಅವರಿಗೆ ಮಹಾನ್ ನಾಯಕರೊಬ್ಬರು ಒಂದು ಟಾಸ್ಕ್ ನೀಡಿದ್ದರು. ಆ ಟಾಸ್ಕ್ ಸಧ್ಯ ನವ್ಯಶ್ರೀ ಅವರ ರಾಜಕೀಯ ಬದುಕಿಗೆ ಕೊಳ್ಳಿ ಇಟ್ಟಿದ್ದು ಸತ್ಯ.

ಸಾಹುಕಾರ್ ಟೀಂ ಬೆನ್ನು ಹತ್ತಿದ್ದ ಬೇತಾಳ ಈ ಚೆಲುವೆ : ಹೌದು ಕಾಂಗ್ರೆಸ್ ಯುವ ನಾಯಕಿ ನವ್ಯಶ್ರೀ ಆರ್ ರಾವ್ ಅವರನ್ನು ಸಮ್ಮಿಶ್ರ ಸರ್ಕಾರದ ವಿರುದ್ಧ ಸಿಡಿದೆದ್ದು ಮುಂಬಯಿಗೆ ಹಾರಿದ್ದ ಅತೃಪ್ತ ಶಾಸಕರನ್ನು ಟ್ರೇಸ್ ಮಾಡಲು ನೇಮಕ ಮಾಡಲಾಗಿತ್ತು. ಹದಿನೇಳು ಜನ ಅತೃಪ್ತ ಶಾಸಕರು ಉಳಿದುಕೊಂಡಿದ್ದ ಹೊಟೇಲ್ ನಲ್ಲಿ ಈ ಯುವತಿ ಗೂಢಾಚರ್ಯ ಮಾಡಲು ನೇಮಕವಾಗಿದ್ದಳು.

ಹೌದು ಯಾವಾಗ ಅತೃಪ್ತ ಶಾಸಕರನ್ನು ಭೇಟಿ ಮಾಡುವಲ್ಲಿ ಸರ್ಕಾರ ವಿಫಲವಾಯಿತು ಆ ಸಂದರ್ಭದಲ್ಲಿ ಮಹಾನ್ ನಾಯಕ ಒಂದು ಟಾಸ್ಕ್ ಟೀಂ ಸಿದ್ದಪಡಿಸಿದ್ದರು. ಅದರಂತೆ ಕಾಂಗ್ರೆಸ್ ಯುವ ನಾಯಕಿ ನವ್ಯಶ್ರೀ ಮುಂಬಯಿ ಹೊಟೇಲ್ ನಲ್ಲಿ ತಂಗಿದ್ದರು. ಅಷ್ಟೇ ಅಲ್ಲದೆ ಅಲ್ಲಿನ ಅತೃಪ್ತ ಶಾಸಕರ ಚಲನವಲನಗಳನ್ನು ಗಮನಿಸಿ ನೇರವಾಗಿ ಮಾಹಿತಿ ನೀಡುವ ಕೆಲಸ ಈ ಯುವತಿ ಮಾಡುತ್ತಿದ್ದಳು.

ಸೀಕ್ರೆಟ್ ಟಾಸ್ಕ್ ಮಳುವಾಯ್ತಾ ಈ ಯುವತಿಗೆ : ಹೌದು ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಬೆಳವಣಿಗೆ ಕಾಣುತ್ತಿದ್ದ ಚನ್ನಪಟ್ಟಣದ ಯುವತಿ ನವ್ಯಶ್ರೀ ಅವರ ಬೆಳವಣಿಗೆಳನ್ನು ಸಹಿಸದ ಕೆಲವರು ಇವರ ವಿರುದ್ಧ ಪಿತೂರಿ ಮಾಡಿದ್ದಾರೆ ಎಂದು ಸ್ವತಃ ನವ್ಯಶ್ರೀ ಅವರೇ ಆರೋಪಿಸಿದ್ದಾರೆ. ಜೊತೆಗೆ ಚನ್ನಪಟ್ಟಣದ ಕಾಂಗ್ರೆಸ್ ನಾಯಕನ ಕೈವಾಡ ಈ ಅಶ್ಲೀಲ ವೀಡಿಯೋ ಹರಿಬಿಟ್ಟ ಪ್ರಕರಣದಲ್ಲಿ ಇದೆ ಎನ್ನುತ್ತಾಳೆ ಈಕೆ.

ಒಟ್ಟಿನಲ್ಲಿ ಆ ಮಹಾನ್ ನಾಯಕ  ಕೊಟ್ಟ ಆ ಒಂದು ಸೀಕ್ರೆಟ್ ಟಾಸ್ಕ್, ಸಧ್ಯ ಯುವತಿಯ ಮಾನ ಮರ್ಯಾದೆ ಮೂರು ಕಾಸಿಗೆ ಹರಾಜು ಆಗಿರುವುದಂತು ಸತ್ಯ ಎಂಬುದು ಇಲ್ಲಿ ಸ್ಪಷ್ಟವಾಗುತ್ತದೆ.

Advertisement

Leave a reply

Your email address will not be published. Required fields are marked *

error: Content is protected !!