ಮಾಜಿ ಶಾಸಕ ಕಾಶಪ್ಪನವರಗೆ 2ನೇ ಮದುವೆ..?
ಹುನಗುಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ 2ನೇ ಮದುವೆ ವಿಚಾರ ಕುರಿತು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದರಲ್ಲಿ ಮಾಧ್ಯಮದವರ ಕೈವಾಡ ಇದೆ ಎಂದು ಮಾಜಿ ಶಾಸಕ ವಿಜಯಾನಂದ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಈ ಬಗ್ಗೆ ನನಗೇನೂ ಗೊತ್ತಿಲ್ಲ, ಈ ಕುರಿತು ಏನಾದರೂ ದಾಖಲೆಗಳಿದ್ದರೆ ನೀಡಿ, ಆಗ ನಾನು ಮಾತನಾಡುತ್ತೇನೆ. ಫೋಟೊ ವೈರಲ್ ಆಗಿರುವುದು ನನಗೆ ಗೊತ್ತಿಲ್ಲ.
ಇಂತಹ ಪೋಟೊ ವೈರಲ್ ಮಾಡುವುದೇ
ಮಾಧ್ಯಮದವರ ಕೆಲಸ. ನಮ್ಮ ವಿರೋಧಿಗಳು ಇಂತಹ ಕೆಲಸ ಮಾಡುತ್ತಿರುತ್ತಾರೆ. ನಾನು ಇದಕ್ಕೆಲ್ಲ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದರು.
ಕಾಂಗ್ರೆಸ್‌ನಲ್ಲಿ ಹೈಕಮಾಂಡ್ ಇದೆ. ಸಿಎಂ ಯಾರು ಎಂಬುದು ಚುನಾವಣೆ ಬಳಿಕ ಹೈಕಮಾಂಡ್ ನಿರ್ಧಾರ ಮಾಡಲಿದೆ. ಅವರ ನಿರ್ಧಾರವನ್ನು ನಾವೆಲ್ಲ ಒಪ್ಪಬೇಕು. ಸಿದ್ದರಾಮಯ್ಯ ಸಿಎಂ ಆಗಬೇಕು ಎಂಬ ಜಮೀರ್ ಅಹ್ಮದ್ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ. ಈ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಸ್ಪಷ್ಟಪಡಿಸಿದರು.