ಮೂಡಲಗಿ : ಭೀಕರ ರಸ್ತೆ ಅಪಘಾತ, ತಪ್ಪಿದ ಅನಾಹುತ
ಮೂಡಲಗಿ : ಚಾಲಕನ ನಿಯಂತ್ರಣ ತಪ್ಪಿ ಎಥೆನಾಲ್ ತುಂಬಿದ ವಾಹನವೊಂದು ಪಲ್ಟಿಯಾಗಿರುವ ಘಟನೆ ಗುರುವಾರ ರಾತ್ರಿ ತಾಲೂಕಿನ ಹಳ್ಳೂರ ಗ್ರಾಮದ ಸಮೀಪ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ನಿಪ್ಪಾಣಿ – ಮುಧೋಳ ಹೆದ್ದಾರಿ ರಲ್ಲಿ ಉಗಾರದಿಂದ – ಬೆಂಗಳೂರು ಕಡೆಗೆ ತೆರಳುವ ವೇಳೆ ಈ ದುರ್ಘಟನೆ ನಡೆದಿದ್ದು, ಹೆದ್ದಾರಿಯ ಪಕ್ಕದಲ್ಲಿರುವ ಕಬ್ಬಿನ ಗದ್ದೆಯಲ್ಲಿ ಅಡ್ಡಲಾಗಿ ಬಿದ್ದಿದೆ. ಚಾಲಕನ ನಿಯಂತ್ರಣ ತಪ್ಪಿ ಅವಘಡಕ್ಕೆ ಕಾರಣ ಎನ್ನಲಾಗಿದೆ.
ಮತ್ತೊಂದು ವಾಹನ ಅಪಘಾತ : ಅದೇ ಹೆದ್ದಾರಿಯಲ್ಲಿ ಹಳ್ಳೂರ ಗ್ರಾಮದ ಗುಬ್ಬಿ ಬಸ್ಟಾಂಡ್ ಹತ್ತಿರ ಕಬ್ಬು ತುಂಬಿ ಸಾಗುತ್ತಿದ್ದ ಟ್ಯಾಕ್ಟರ್ ಟೇಲರಿಗೆ ಹಿಂಬದಿಯಿಂದ ಮಿನಿ ಗೂಡ್ಸ್ ವಾಹನ ಡಿಕ್ಕಿಯಾಗಿ ಗೂಡ್ಸ್ ವಾಹನದಲ್ಲಿ ಇದ್ದ ವಾಹನ ಚಾಲಕನಿಗೆ ಗಾಯಗಳಾಗಿದ್ದು ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಮೂಡಲಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆಗಳು ಜರುಗಿವೆ