
ಕ್ಷುಲ್ಲಕ ಕಾರಣಕ್ಕೆ ಪಂಢರಪುರ ವಿಠ್ಠಲ ಭಕ್ತರ ಮೇಲೆ ಹಲ್ಲೆ

ಮಿರಜ್ : ಪವಿತ್ರ ಯಾತ್ರಾ ಸ್ಥಳ ಮಹಾರಾಷ್ಟ್ರದ ಪಂಢರಪುರದ ವಿಠ್ಠಲನ ಸನ್ನಿಧಿಗೆ ತೆರಳಿ ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ಬೆಳಗಾವಿಯ ಭಕ್ತರ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.
ಆಷಾಡ ಏಕಾದಶಿ ನಿಮಿತ್ತ ಮಹಾರಾಷ್ಟ್ರದ ಪಂಡರಪುರದ ವಿಠ್ಠಲನ ದರ್ಶನಕ್ಕೆ ತೆರಳಿದ್ದ ಕರ್ನಾಟಕದ ಭಕ್ತರು ವಾಪಸ್ ಮನೆಗೆ ತೆರಳುವ ಸಂದರ್ಭದಲ್ಲಿ ಸಾಂಗ್ಲಿ ಜಿಲ್ಲೆಯ ಮಿರಜ್ ತಾಲೂಕಿನ ಮಾಲಗಾಂವ ಬಳಿ ಮರಾಠಿ ದಾರಿ ಮಧ್ಯೆ ಕಾರು ನಿಲ್ಲಿಸಿದ್ದ ಕಾರಣ ಮಾತಿನ ಚಕಮಕಿ ಉಂಟಾಗಿದೆ.
ಇಷ್ಟಕ್ಕೆ ಕಾರಿನಲ್ಲಿದ್ದ ಪುಂಡರು ಕರ್ನಾಟಕದ ಭಕ್ತರ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ಮೂವರನ್ನು ಮಿರಜ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಮಿರಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.