Select Page

Advertisement

ಬಣ್ಣದ ಮಾತಿಗೆ ಮರುಳಾಗಬೇಡಿ ; ಉಸಿರು ಇರುವರೆಗೆ ನಿಮ್ಮ ಸೇವೆ ಮಾಡುವೆ – ಹೆಬ್ಬಾಳ್ಕರ್

ಬಣ್ಣದ ಮಾತಿಗೆ ಮರುಳಾಗಬೇಡಿ ; ಉಸಿರು ಇರುವರೆಗೆ ನಿಮ್ಮ ಸೇವೆ ಮಾಡುವೆ – ಹೆಬ್ಬಾಳ್ಕರ್

ಬೆಳಗಾವಿ : ಕಳೆದ 5 ವರ್ಷದಲ್ಲಿ ನಾನು ಮಾಡಿರುವ ಅಭಿವೃದ್ಧಿ ಕೆಲಸಗಳ ಕಾರಣದಿಂದಾಗಿ 2018ರ ವಿಧಾನ ಸಭೆ ಚುನಾವಣೆಗಿಂತ ದೊಡ್ಡ ಪ್ರಮಾಣದ ಅಂತರದಲ್ಲಿ ಈ ಬಾರಿ ಗೆಲುವಾಗಲಿದೆ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು ಗುರುವಾರ ಸಂಜೆ ಮುತಗಾದಲ್ಲಿ ಭಾರೀ ಜನಸ್ತೋಮದ ಮಧ್ಯೆ ಪ್ರಚಾರ ನಡೆಸಿದರು. ಈ ವೇಳೆ ಮಾತನಾಡಿ, ನಾನು ಅಭಿವೃದ್ಧಿಯನ್ನು ಮುಂದಿಟ್ಟು ನಿಮ್ಮಲ್ಲಿ ಮತ ಕೇಳುತ್ತೇನೆ. ನಿಮ್ಮ ಮನೆಯ ಮಗಳಾಗಿ, ಅಕ್ಕನಾಗಿ, ತಂಗಿಯಾಗಿ, ತಾಯಿಯಾಗಿ ನಿಮ್ಮ ಆಶಿರ್ವಾದ ಕೇಳುತ್ತಿದ್ದೇನೆ. ವಾಸ್ತವದ ಆಧಾರದ ಮೇಲೆ ನೀವು ನನ್ನನ್ನು ಬೆಂಬಲಿಸಿ. ಯಾವುದೇ ಬಣ್ಣದ ಮಾತುಗಳಿಗೆ ಮರುಳಾಗಬೇಡಿ. ಈ ಬಾರಿ ಕಳೆದ ಬಾರಿಗಿಂತ ಹೆಚ್ಚಿನ ಅಂತರದಿಂದ ಗೆಲುವು ಸಾಧಿಸುವಂತೆ ಮಾಡಿ ಎಂದು ಕೋರಿದರು.

ನಾನು ಯಾವುದೇ ಊರಿಗೆ ಹೋದರೂ ನೀವು ತೋರಿಸುತ್ತಿರುವ ಪ್ರೀತಿಗೆ ಮಿತಿಯೇ ಇಲ್ಲ. ನಿಮ್ಮಂತಹ ಜನರನ್ನು ಪಡೆದ ನಾನೇ ಧನ್ಯ. ಮುಂದಿನ 5 ವರ್ಷ ಅಷ್ಟೇ ಅಲ್ಲ, ಕೊನೆಯ ಉಸಿರಿರುವವರೆಗೂ ನಿಮ್ಮ ಸೇವೆ ಮಾಡುವ ಶಕ್ತಿಯನ್ನು ದೇವರು ಕೊಡಲೆಂದು ಪ್ರಾರ್ಥಿಸುತ್ತೇನೆ. ಪ್ರತಿಯೊಬ್ಬರೂ ನಿಮ್ಮ ಸಂಬಂಧಿಕರು, ಪರಿಚಯಸ್ತರ ಬಳಿ ನನ್ನ ಪರವಾಗಿ ಮತ ಯಾಚನೆ ಮಾಡಿ ಎಂದು ಹೆಬ್ಬಾಳಕರ್ ವಿನಂತಿಸಿದರು.

Advertisement

Leave a reply

Your email address will not be published. Required fields are marked *