ಬೆಳಗಾವಿಗಿಂತ ಉಡುಪಿಯವರು ಬುದ್ದಿವಂತರು : ಲಕ್ಷ್ಮೀ ಹೆಬ್ಬಾಳ್ಕರ್ ಹೀಗೆ ಹೇಳಿದ್ಯಾಕೆ….?
ಬೆಳಗಾವಿ : ನನ್ನ ಹಾಗೂ ಸತೀಶ್ ಜಾರಕಿಹೊಳಿ ಮಧ್ಯೆ ಯಾವುದೇ ಬಿರುಕು ಇಲ್ಲ. ಆದರೆ ಮಾಧ್ಯಮಗಳು ಪದೇ ಪದೇ ಬಿರುಕು ಎಂದು ಹೇಳುತ್ತಾ ಸುಳ್ಳನ್ನು ಸತ್ಯ ಮಾಡುತ್ತಿದೆ. ಈ ವಿಚಾರವಾಗಿ ಬೆಳಗಾವಿ ಪತ್ರಕರ್ತರು ಉಡುಪಿಯವನ್ನು ನೋಡಿ ಕಲಿಯಬೇಕು ಎಂದು ಶಾಸಕಿ ಹೆಬ್ಬಾಳ್ಕರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಡೆದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಇವರು. ಉಡುಪಿ ಜನ ಬಹಳ ಬುದ್ದಿವಂತರು, ಅವರು ಸರ್ಕಾರದ ಕೆಲಸ ಹೇಗೆ ಮಾಡಿಸಿಕೊಳ್ಳುತ್ತಾರೆ. ಉಡುಪಿಯವರನ್ನು ನೋಡಿ ಕಲಿಬೇಕು ಎಂದು ಹೇಳಿಕೆ ನೀಡಿದ್ದಾರೆ.
ಹೆಬ್ಬಾಳ್ಕರ್ ಹೇಳಿಕೆಗೆ ಬೆಳಗಾವಿ ಪತ್ರಕರ್ತರ ಖಂಡನೆ :
ಪತ್ರಕರ್ತರ ಬಗ್ಗೆ ಸಚಿವೆ ಹೆಬ್ಬಾಳ್ಕರ ಅವಮಾನಕರ ಹೇಳಿಕೆ: ಎಐಸಿಸಿ ಹಾಗೂ ಸಿಎಂಗೆ ದೂರು ನೀಡಲು ಪತ್ರಕರ್ತರ ನಿರ್ಧಾರ
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಬೆಳಗಾವಿ ಪತ್ರಕರ್ತರು ಅಪ್ರಭುದ್ಧರು ಎನ್ನುವ ಅರ್ಥದಲ್ಲಿ ನೀಡಿದ್ದ ಹೇಳಿಕೆಯನ್ನ ಖಂಡಿಸಿ ಇವತ್ತು ಕನ್ನಡ ಸಾಹಿತ್ಯ ಭವನದಲ್ಲಿ ಪತ್ರಕರ್ತರಿಂದ ಖಂಡನಾ ಸಭೆ ನಡೆಸಲಾಯಿತು.
ಸಭೆಯಲ್ಲಿ 42 ಕ್ಕೂ ಅಧಿಕ ಹಿರಿಯ ಪತ್ರಕರ್ತರು ಭಾಗಿಯಾಗಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಹೇಳಿಕೆಯನ್ನ ತೀವ್ರವಾಗಿ ಖಂಡಿಸಲಾಯಿತು. ಸಚಿವೆ ಹೆಬ್ಬಾಳ್ಕರ ಅವರು ಇತ್ತೀಚೆಗೆ ಪತ್ರಕರ್ತರ ಜೊತೆ ನಡೆದುಕೊಳ್ಳುತ್ತಿರುವ ನಡುವಳಿಕೆ ಬಗ್ಗೆ ಹಿರಿಯ ಪತ್ರಕರ್ತರು ತೀವ್ರ ಆಕ್ರೋಶ, ಅಸಮಾಧಾನ ವ್ಯಕ್ತಪಡಿಸಿದರು.
ಸಭೆಯಲ್ಲಿ ಸಚಿವೆ ಹೆಬ್ಬಾಳ್ಕರ ವಿರುದ್ಧ ಐದು ಪ್ರಮುಖ ಖಂಡಣಾ ನಿರ್ಣಯವನ್ನ ತೆಗೆದುಕೊಳ್ಳಲಾಯಿತು.
1) ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಅವರು ಬೆಳಗಾವಿ ಪತ್ರಕರ್ತರ ವಿರುದ್ಧ ನೀಡಿದ್ದ ಹೇಳಿಕೆಯನ್ನ ಖಂಡಿಸಲಾಯಿತು.
2)ಸಚಿವರು ತಮ್ಮ ಹೇಳಿಕೆಯನ್ನ ಕೂಡಲೇ ಹಿಂಪಡೆದುಕೊಂಡು ಬೇಷರತ್ತಾಗಿ ಕ್ಷಮೆಯಾಚಿಸಬೇಕೆಂದು ಒಕ್ಕೊರಲಿನಿಂದ ಒತ್ತಾಯಿಸಲು.
3)ಸಚಿವರ ಹೇಳಿಕೆಯ ವಿರುದ್ಧ ಎಐಸಿಸಿ, ಕೆಪಿಸಿಸಿ ಅಧ್ಯಕ್ಷರು ,ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಗೆ ದೂರು ನೀಡಲು ನಿರ್ಧರಿಸಲಾಯಿತು.
4)ಸಭೆಯಲ್ಲಿ ತೆಗೆದುಕೊಂಡು ಈ ನಿರ್ಣಯಗಳನ್ನ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷರ ಗಮನಕ್ಕೆ ತರಲು ನಿರ್ಧರಿಸಲಾಯಿತು.
5) ಇಂದಿನ ಖಂಡನಾ ಸಭೆಯ ನಿರ್ಣಯ ವರದಿಯನ್ನ ಪತ್ರಿಕೆ ಹಾಗೂ ವಿವಿಧ ಮಾಧ್ಯಮದಲ್ಲಿ ಪ್ರಕಟಿಸಲು ನಿರ್ಧರಿಸಲಾಯಿತು.
ನವೆಂಬರ್11 ರಂದು ಕನ್ನಡ ಭವನದಲ್ಲಿ ಪತ್ರಕರ್ತರ ಅಭಿನಂದನಾ ಕಾರ್ಯಕ್ರಮದಲ್ಲಿ ಬೆಳಗಾವಿ ಪತ್ರಕರ್ತರ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಗರುವಾಗಿ ಮಾತನಾಡಿದ್ದರು.

