ಬೆಳಗಾವಿ : ಖ್ಯಾತ ಸ್ವಾಮೀಜಿ ಒಬ್ಬ ಮಹಿಳೆಯರ ಸಹವಾಸ ಮಾಡಿ ಒದೆ ತಿಂದ ಘಟನೆ ಸಧ್ಯ ರಾಜ್ಯಾದ್ಯಂತ ಸುದ್ದಿಯಾಗುತ್ತಿದೆ. ಪ್ರಬಲ ಸಮುದಾಯಕ್ಕೆ ಸೇರಿರುವ ಈ ಸ್ವಾಮೀಜಿ ಕುರಿತು ಕುತೂಹಲಕಾರಿ ಅಂಶಗಳು ಬೆಳಕಿಗೆ ಬರುತ್ತಿವೆ.

ನೂರಕ್ಕೂ ಅಧಿಕ ಯುವತಿಯರ ಜೊತೆ ಇದ್ದ ಪ್ರತ್ಯೇಕ ಘಟನೆ ನಂತರ ಸ್ವಾಮೀಜಿ ಲಾಕ್ ಆಗಿದ್ದಾನೆ.‌ ವಿಜಯಪುರ ಮೂಲದ ಬೆಂಗಳೂರಿನಲ್ಲಿ ವಾಸವಿರುವ ಮಹಿಳೆ ಜೊತೆಗೆ ಎರಡು ದಿನ ಸ್ವಾಮೀಜಿ ಕಳೆದಿದ್ದಾರೆ.

ನಿರಂತರ ಎರಡು ದಿನಗಳ ಸಂಧಾನ ನಡೆದರೂ ಯಾವುದೇ ಫಲಪ್ರದ ಆಗಿಲ್ಲ. ಮೊದ‌ ಮೊದಲು ಹಣ ಕೊಡುವುದಾಗಿ ಹೇಳಿದ್ದ ಸ್ವಾಮಿಜಿ ನಂತರ ಧಮ್ಕಿ ಹಾಕಿದ್ದಾ‌ನೆ. ಈ ವೇಳೆ ಯುವತಿ ಮನೆಯಿಂದ ಹೊರಬಂದು ಜನರನ್ನು ಸೇರಿಸಿದ್ದಾಳೆ.

ಯಾವಾಗ ತಮ್ಮದೇ ಸಮುದಾಯದ ಖ್ಯಾತ ಸ್ವಾಮೀಜಿ ಕಾಮ ಪುರಾಣ ತಿಳಿದುಬರುತ್ತಿದ್ದಂತೆ ಆಕ್ರೋಶಗೊಂಡ ಜನ ಸರಿಯಾಗಿ ಥಳಿಸಿದ್ದಾರೆ. ಪೊಲೀಸ್ ಠಾಣೆಗೆ ಹೋಗುವ ಮೊದಲೇ ಪ್ರಮುಖರ ಮಧ್ಯಸ್ಥಿಕೆ ಕಾರಣಕ್ಕೆ ಪ್ರಕರಣ ಹೊರಬಂದಿಲ್ಲ.

ಘಟನೆ ನಡೆದ ದಿನ ಸ್ವಾಮೀಜಿ ವಿಜಯಪುರ ‌ಭಾಗದ ಖ್ಯಾತ ರಾಜಕಾರಣಿಗೆ ಕರೆ ಮಾಡಿದ್ದಾರೆ. ಆದರೆ ಆ ರಾಜಕಾರಣಿ ಫೋನ್ ತಗೆದುಕೊಂಡಿಲ್ಲ. ನಂತರ ಇನ್ನೂ ಅನೇಕರಿಗೆ ಸ್ವಾಮೀಜಿ ಕರೆ ಮಾಡಿ ಸಹಾಯ ಕೇಳಿದ್ದಾರೆ.