ಅವರು ಏನು ಅಂತ ರಾಜ್ಯದ ಜನಕ್ಕೆ ಗೊತ್ತಿದೆ ; ಸಾಹುಕಾರ್ ವಿರುದ್ಧ ಗುಡುಗಿದ ಸಚಿವೆ ಲಕ್ಷ್ಮೀ
ಬೆಳಗಾವಿ : ನನ್ನ ಕುರಿತು ಯಾರು ಏನೇ ಅಂದರು ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಅವರು ಏನು ಅಂತ ರಾಜ್ಯದ ಜನ ನೋಡಿದೆ ಎಂದು ನೇರವಾಗಿ ರಮೇಶ್ ಜಾರಕಿಹೊಳಿ ವಿರುದ್ಧ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಗುಡುಗಿದರು.
ಬೆಳಗಾವಿ ನಗರದಲ್ಲಿ ಸುದ್ದಿಘೋಷ್ಠಿ ಉದ್ದೇಶಿಸಿ ಮಾತನಾಡಿದ ಇವರು. ರಮೇಶ್ ಜಾರಕಿಹೊಳಿ ಸಚಿವೆ ಹೆಬ್ಬಾಳ್ಕರ್ ಅವರಿಗೆ ವಿಷಕನ್ಯೆ ಎಂದು ಹೇಳಿದ್ದ ವಿಷವಾಗಿ ಪ್ರತಿಕ್ರಿಯೆ ನೀಡಿ, ಭಾರತೀಯ ಸಂಸ್ಕೃತಿ ಮೇಲೆ ವಿಶ್ವಾಸ ಇಟ್ಟವರು ನಾವು. ಅವರು ನನ್ನ ಕುರಿತು ಏನೇ ಹೇಳಿಕೆ ನೀಡಿದರು ಜನ ಉತ್ತರ ಕೊಡುತ್ತಾರೆ. ಅವರು ಏನು? ಅವರ ಸಂಸ್ಕೃತಿ ಎಂತಹದು ಎಂದು ರಾಜ್ಯದ ಜನ ನೋಡಿದ್ದಾರೆ ಎಂದು ತಿರುಗೇಟು ನೀಡಿದರು.
ದುಡ್ಡಿನಿಂದ ಚುನಾವಣೆ ಮಾಡಲು ಹೊರಟ್ಟಿದ್ದೀರಿ ಎಂಬ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು. ನಾನು ಹೆಸರಿಗೆ ಮಾತ್ರ ಲಕ್ಷ್ಮೀ ನಮ್ಮ ಬಳಿ ಎಲ್ಲಿಂದ ಹಣ ಬರುತ್ತದೆ. ಅವರೇ ಸಾಹುಕಾರರು ಎಂದು ಮಾರ್ಮಿಕವಾಗಿ ಉತ್ತರಿಸಿದರು. ಅಂಗನವಾಡಿ ಕಾರ್ಯಕರ್ತೆಯರ ಬಳಿ ಒಂದು ಲಕ್ಷ ರೂ. ಹಣ ಪಡೆದ ಆರೋಪ ಅವರು ಮಾಡುತ್ತಿದ್ದಾರೆ, ಅವರ ಬಳಿ ದಾಖಲೆ ಇದ್ದರೆ ತಗೆದುಕೊಂಡು ಬಂದು ಸಾಬೀತು ಮಾಡಲಿ ಎಂದು ಗುಡುಗಿದರು.
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ವಿರೋಧ ಪಕ್ಷಗಳ ತಂತ್ರ ಅರಿಯುವಲ್ಲಿ ನಮ್ಮವರು ವಿಫಲರಾದರು ಎಂಬ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿ. ಚುನಾವಣೆ ಸತೀಶ್ ಜಾರಕಿಹೊಳಿ ಅವರು ಕೊಟ್ಟ ಪ್ರತಿಕ್ರಿಯೆ ಅದು ಅವರ ಅಭಿಪ್ರಾಯ. ನಾನು ಸೋತ ಮಾತ್ರಕ್ಕೆ ಯಾರ ವಿರುದ್ಧ ಆರೋಪ ಮಾಡುವುದಿಲ್ಲ. ಈ ಕುರಿತು ಚರ್ಚೆ ನಡೆಸುತ್ತೇವೆ. ನಾನು ಪಕ್ಷ ಸಂಘಟನೆ ಕೆಲಸ ಮುಂದುವರಿಸುವೆ ಎಂದರು.