
ಕೊಕಟನೂರ ಯಲ್ಲಮ್ಮ ದೇವಿಗೆ ಜಲದಿಗ್ಬಂಧನ

ಬೆಳಗಾವಿ : ಕಳೆದ ಮೂರು ದಿನಗಳಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿರುವ ಪರಿಣಾಮ ಅಥಣಿ ತಾಲೂಕಿನ ಕೊಕಟನೂರ ಯಲ್ಲಮ್ಮ ದೇವಸ್ಥಾನಕ್ಕೆ ಜಲದಿಗ್ಬಂಧನ ಉಂಟಾಗಿದೆ.
ಅಥಣಿ ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿವೆ. ಐತಿಹಾಸಿಕ ಹಿನ್ನಲೆ ಹೊಂದಿರುವ ಕೊಕಟನೂರ ಯಲ್ಲಮ್ಮ ದೇವಸ್ಥಾನಕ್ಕೆ ಮಳೆ ನೀರು ನುಗ್ಗಿದ್ದು ದೇವಸ್ಥಾನಕ್ಕೆ ಜಲದಿಗ್ಬಂಧನ ಎದುರಾಗಿದೆ.
ಮೂಲತಃ ದೇವಸ್ಥಾನ ಹಳ್ಳದಲ್ಲಿದ್ದು ಕಳೆದ ಎರಡು ವರ್ಷಗಳಿಂದ ನೀರು ಹಳ್ಳಕ್ಕೆ ಬಂದಿರಲಿಲ್ಲ. ಆದರೆ ಕಳೆದ ಮೂರು ದಿನಗಳಿಂದ ಬಿಟ್ಟು ಬಿಡದೆ ಮಳೆ ಸುರಿಯುತ್ತಿರುವ ಪರಿಣಾಮ ದೇವಿ ಮೂರ್ತಿ ಮಳೆ ನೀರಿನಲ್ಲಿ ಮುಳುಗಿದ್ದು ಹಾಗೆಯೇ ಪೂಜೆ ನೆರವೇರಿಸಲಾಗುತ್ತಿದೆ.