Select Page

Advertisement

ಯಾವಾಗ ನಡೆಯಬಹುದು ರಾಜ್ಯ ವಿಧಾನಸಭಾ ಚುನಾವಣೆ : ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಯಾವಾಗ ನಡೆಯಬಹುದು ರಾಜ್ಯ ವಿಧಾನಸಭಾ ಚುನಾವಣೆ : ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಬೆಂಗಳೂರು : ರಾಜ್ಯ ರಾಜಕಾರಣದ ಮಹತ್ವದ ಘಟ್ಟ ಎಂದೇ ಬಿಂಬಿತವಾಗಿರುವ 2023 – ವಿಧಾನಸಭಾ ಚುನಾವಣೆ ತಯಾರಿಯಲ್ಲಿ ರಾಜ್ಯ ಹಾಗೂ ಕೇಂದ್ರ ಚುನಾವಣಾ ಆಯೋಗ ಭರ್ಜರಿ ತಯಾರಿ ನಡೆಸಿದ್ದು ಈಗಾಗಲೇ ಹಲವು ಮಹತ್ವದ ನಿರ್ಧಾರಗಳನ್ನ ಪ್ರಕಟಿಸಿದೆ.

ರಾಜ್ಯ ಚುನಾವಣಾ ಆಯೋಗ ಕೇಂದ್ರಕ್ಕೆ ಸಲ್ಲಿಸಿರುವ ಚುನಾವಣಾ ದಿನಾಂಕಗಳ ಪೈಕಿ, ಬರುವ ಏಪ್ರಿಲ್ – 29, ಹಾಗೂ 30 ಅಥವಾ ಮೇ – 04 ಅಥವಾ 05 ಕ್ಕೆ ಚುನಾವಣೆ ನಡೆಸಬಹುದು ಎಂಬುದನ್ನು ತಿಳಿಸಿದೆ. ಈ ಎರಡು ದಿನಾಂಕದ ಆಧಾರದ ಮೇಲೆ ನಿರ್ಧಾರ ಕೈಗೊಳ್ಳಬಹುದು.

ಬರುವ 2023 ರ ಮೇ 27 ಕ್ಕೆ ಸಧ್ಯದ ವಿಧಾನಸಭೆ ಅವಧಿ  ಮುಕ್ತಾಯ ಆಗಲಿದೆ. ಈ ಎಲ್ಲಾ ಕಾರಣಗಳಿಂದ ಆ ದಿನಾಂಕದ ಒಳಗಾಗಿ ವಿಧಾನಸಭೆ ಚುನಾವಣೆ ಮುಕ್ತಾಯವಾಗಿ ಹೊಸ ವಿಧಾನಸಭೆ ಅಸ್ತಿತ್ವಕ್ಕೆ ಬರಬೇಕಾಗುತ್ತದೆ. ಈ ಎಲ್ಲಾ ದೃಷ್ಟಿಯಿಂದ ಚುನಾವಣಾ ಆಯೋಗ ತನ್ನ ನಿರ್ಧಾರ ಪ್ರಕಟಿಸಲಿದೆ.

16 ನೇ ಅವಧಿಗೆ ವಿಧಾನಸಭೆ ಚುನಾವಣೆ : ಹೌದು ಪ್ರಸ್ತುತ ಹದಿನೈದನೇ ಅವಧಿಯ ವಿಧಾನಸಭೆ ನಡೆಯುತ್ತಿದ್ದು ಇದು ಮೇ. ತಿಂಗಳಿನಲ್ಲಿ ಅಂತ್ಯವಾಗಲಿದೆ. ಹಾಗೆಯೇ 16 ನೇ ಅವಧಿಗೆ ರಾಜ್ಯ ವಿಧಾನಸಭಾ ಚುನಾವಣೆ ನಡೆಯಲಿರುವುದು ಒಂದು ವಿಶೇಷ. ಒಟ್ಟು 224 ಸದಸ್ಯ ಬಲದ ಕರ್ನಾಟಕ ರಾಜ್ಯ ವಿಧಾನಸಭೆಗೆ ದೇಶದಲ್ಲೇ ಒಂದು ಮಹತ್ವವಿದೆ.

ಪ್ರಸ್ತುತ ಕರ್ನಾಟಕದ ಮುಖ್ಯ ಚುನಾವಣಾ ಆಯೋಗದ ಆಯುಕ್ತ ಡಾ.ಬಿ.ಬಸವರಾಜು  ಕಾರ್ಯ ನಿರ್ವಹಿಸುತ್ತಿದ್ದಾರೆ. ಹಾಗೆಯೇ ಕೇಂದ್ರ ಚುನಾವಣೆ ಆಯೋಗದ  ಮುಖ್ಯ ಚುನಾವಣಾ ಆಯುಕ್ತರಾಗಿ ರಾಜೀವ್ ಕುಮಾರ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

Advertisement

Leave a reply

Your email address will not be published. Required fields are marked *