ಗೋಕಾಕ್ ಉದ್ಯಮಿ ಭೀಕರ ಕೊಲೆ
ಗೋಕಾಕ್ : ಅಪಹರಣಕ್ಕೆ ಒಳಗಾಗಿದ್ದ ಗೋಕಾಕ್ ಉದ್ಯಮಿ ಶವವಾಗಿ ಪತ್ತೆಯಾಗಿದ್ದು, ವ್ಯಾವಹಾರಿಕ ಕಾರಣದಿಂದ ಈ ಕೊಲೆ ನಡೆದಿದೆ ಎಂದು ಹೇಳಲಾಗಿದೆ.
ಪಟ್ಟಣದ ಉದ್ಯಮಿ ರಾಜು ಝಂವರ್ ಎಂಬುವವರು ಶುಕ್ರವಾರ ಕಾಣೆಯಾಗಿದ್ದರು. ಮನೆಯವರು ಈ ಕುರಿತು ಗೋಕಾಕ್ ಪೊಲೀಸ್ ಠಾಣೆಗೆ ತೆರಳಿ ಮಾಹಿತಿ ಹಂವಿಕೊಂಡಿದ್ದರು. ಪ್ರಕರಣ ತನಿಖೆ ಮಡೆಸಿದ್ದ ಪೊಲೀಸರಿಗೆ ರಾಜು ಕೊನೆಯದಾಗಿ ವೈದ್ಯ ಸಚಿನ್ ಶಿರಗಾಂವಿ ಜೊತೆ ಮಾತನಾಡಿದ್ದಾಗಿ ತಿಳಿಬಂದಿತ್ತು.
ಮೊದಲು ರಾಜು ಮತ್ತು ಸಚಿನ್ ಶಿರಗಾವಿ ನಡುವೆ ವ್ಯಾಪಾರ ವ್ಯವಹಾರ ಆರಂಭವಾಗಿದೆ. ನಂತರ ಅದು ಕೋಟ್ಯಾಂತರ ರುಪಾಯಿ ವ್ಯವಹಾರದವರೆಗೂ ವಿಸ್ತಾರಗೊಂಡಿದೆ. ಇತ್ತೀಚಿನ ದಿನಗಳಲ್ಲಿ ಇಬ್ಬರ ನಡುವಿನ ಮನಸ್ತಾಪ ತೀವ್ರಗೊಂಡಿದ್ದು ಕೊಲೆಯವರೆಗೂ ಹೋಗಿದೆ ಎನ್ನಲಾಗಿದೆ.
ಇನ್ನೂ ಶವದ ಹುಡುಕಾಟ ಮುಂದುವರಿದ್ದಿದ್ದು ಪೊಲೀಸರು ಶೋಧಕಾರ್ಯ ಮುಂದುವರಿಸಿದ್ದಾರೆ.