ನಾಪತ್ತೆಯಾಗಿದ್ದ ಜೈನ ಮುನಿ ಶವವಾಗಿ ಪತ್ತೆ
ಚಿಕ್ಕೋಡಿ : ಶುಕ್ರವಾರ ಆಶ್ರಮದಿಂದ ನಾಪತ್ತೆಯಾಗಿದ್ದ ಜೈನ ಮುನಿ ಒಬ್ಬರನ್ನು ಹತ್ಯೆಗೈದ ಘಟನೆ ನಡೆದಿದೆ.
ಚಿಕ್ಕೋಡಿ ತಾಲೂಕಿನ ಹಿರೇಕೊಡಿಯ ನಂದಿ ಪರ್ವತ ಜೈನ ಆಶ್ರಮದ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜ್ ಹತ್ಯೆಯಾದ ಮುನಿ.
ಹಣಕಾಸಿನ ವ್ಯವಹಾರದ ಹಿನ್ನಲೆಯಲ್ಲಿ ಬೆಂಬಲಿಗರು ಜೈನ ಮುನಿ ಕೊಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆಯಾದರು, ಪ್ರಕರಣದ ತನಿಖೆ ನಂತರ ಸತ್ಯಾಸತ್ಯತೆ ಹೊರಬರಲಿದೆ.