Select Page

Advertisement

ವಿದ್ಯಾರ್ಥಿನಿ ಮೇಲೆ ಶಾಲಾ‌ ಶಿಕ್ಷಕ ಅತ್ಯಾಚಾರ ; ಆರೋಪಿ ಬಂಧನ

ವಿದ್ಯಾರ್ಥಿನಿ ಮೇಲೆ ಶಾಲಾ‌ ಶಿಕ್ಷಕ ಅತ್ಯಾಚಾರ ; ಆರೋಪಿ ಬಂಧನ

ಕಲಬುರಗಿ : ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಅತಿಥಿ ಶಿಕ್ಷಕನನ್ನು ಬಂಧಿಸಿ ಜೈಲಿಗಟ್ಟಿರುವಂತಹ ಘಟನೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಮಾದನಹಿಪ್ಪರಗಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

14 ವರ್ಷದ ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ಕಾಮುಕ ಅತಿಥಿ ಶಿಕ್ಷಕ ಶಿವರಾಜ್ ಅತ್ಯಾಚಾರ ಎಸಗಿದ್ದಾನೆ. ಶಿವರಾಜ್ ಅದೇ ಗ್ರಾಮದ ಶಾಲೆಯಲ್ಲಿ ಹಲವು ದಿನಗಳಿಂದ ಅತಿಥಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ.

ವಿದ್ಯಾರ್ಥಿನಿಯ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭವನ್ನೇ ಬಂಡವಾಳ ಮಾಡಿಕೊಂಡ ನೀಚ ಶಿಕ್ಷಕ ಆಕೆಯ ಮನೆಯನ್ನು ಹೊಕ್ಕು ಅತ್ಯಾಚಾರ ಎಸಗಿದ್ದಾನೆ. ಇದೀಗ ಮಾದನಹಿಪ್ಪರಗಾ ಪೊಲೀಸರು ಶಿವರಾಜ್‌ನನ್ನು ಬಂಧಿಸಿ, ಪೋಕ್ಸೋ ಕೇಸ್‌ ದಾಖಲಿಸಿಕೊಂಡಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!