ಬೆಳಗಾವಿ : ಸಮಾಜದ ಜೊತೆ ನಿಲ್ಲಬೇಕಾದ ಸ್ವಾಮೀಜಿ ರಾಜಕೀಯವಾಗಿ ಒಬ್ಬ ವ್ಯಕ್ತಿ ಪರ ನಿಂತಿದ್ದು ಸರಿಯಲ್ಲ, ಇದನ್ನು ನಾನು ವೈಯುಕ್ತಿಕವಾಗಿ ಖಂಡಿಸುತ್ತೇನೆ ಎಂದು ಕಾಗವಾಡ ಶಾಸಕ ರಾಜು ಖಾಗೆ ಅಭಿಪ್ರಾಯಪಟ್ಟರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು.
ಸಮಾಜದ ಗುರುಗಳಾದ ಕೂಡಲಸಂಗಮ ಬಸವ ಜಯಮೃತ್ಯುಂಜಯ ಸ್ವಾಮೀಜಿ ಒಬ್ಬ ವ್ಯಕ್ತಿ ಪರ ಹೋರಾಟ ಮಾಡಬಾರದು. ಯತ್ನಾಳ್ ಅವರನ್ನು ಉಚ್ಚಾಟನೆ ಮಾಡಿದ್ದು ಬಿಜೆಪಿ ಪಕ್ಷದ ಆಂತರಿಕ ವಿಚಾರ.‌ ಈ ವಿಚಾರದಲ್ಲಿ ಸ್ವಾಮೀಜಿ ನಡೆಗೆ ನನ್ನ ಸಹಮತ ಇಲ್ಲ ಎಂದರು.

ಒಂದು ಪಕ್ಷದ ಆಂತರಿಕ ವಿಚಾರದಲ್ಲಿ ಸ್ವಾಮೀಜಿಗಳು ಹೋಗಬಾರದು. ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ಸೇರಿದಂತೆ ಅನೇಕ ಹೋರಾಟ ಮಾಡಿರುವ ಕೂಡಲಸಂಗಮ ಬಸವ ಜಯಮೃತ್ಯುಂಜಯ ಶ್ರೀ ಯತ್ನಾಳ್ ಪರ ಹೋರಾಟ ಮಾಡುವು ನಿರ್ಧಾರ ಸರಿಯಲ್ಲ ಎಂದರು.