ಹಾಸನ : ಜಿಲ್ಲೆಯಲ್ಲಿ ಹೃದಯಾಘಾತಗಳ ಸಂಖ್ಯೆ ಏರುಗತಿಯಲ್ಲಿ ಸಾಗಿವೆ. ಈವರೆಗಿನ ಸಾವಿನ ಸಂಖ್ಯೆ ಎದೆ ಬಡಿತ ಹೆಚ್ಚುಸುತ್ತಿದ್ದು, ಈ ನಡುವೆ ಇನ್ನೋರ್ವ ಯುವಕ ಮೃತಪಟ್ಟಿದ್ದಾನೆ.

ಗುರುವಾರ ರಾತ್ರಿ 21 ವರ್ಷದ ಮದನ್ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಮೂಲತಃ ಹಾಸನದ ಚಿಟ್ನಹಳ್ಳಿ ಗ್ರಾಮದ ಈತ ತಾಯಿಯೊಡನೆ ಚನ್ನಪಟ್ಟಣದಲ್ಲಿ ವಾಸವಿದ್ದ. ಹಾಸನದ ಚಿಕ್ಕಕೊಂಡಗಿಳದಲ್ಲಿರುವ ಭಾವನ ಮನೆಗೆ ಬಂದಾಗ ಘಟನೆ ಸಂಭವಿಸಿದೆ.

ಈ ಪ್ರಕರಣದಿಂದ ಹಾಸನದಲ್ಲಿ ಸಾವಿನ ಸಂಖ್ಯೆ 34 ಕ್ಕೆ ಏರಿಕೆಯಾಗಿದೆ. ನಿರಂತರ ಸಾವಿನಿಂದ ಜನ ಕಂಗಾಲಾಗಿದ್ದಾರೆ.