ಕಾಗವಾಡ : ಹಿಂದೂ ಮಹಿಳೆಯರ ಕುರಿತು ಅವಹೇಳನಕಾರಿ ಸಂದೇಶ ಹರಿಬಿಟ್ಟ ಬಿಜೆಪಿ ಮುಖಂಡ
ಕಾಗವಾಡ : ಹಿಜಾಬ್ ವಿಷಯದಲ್ಲಿ ಮುಸ್ಲಿಂ ಮಹಿಳೆಯರು ಹಾಗೂ ಹಿಂದೂ ಮಹಿಳೆಯರನ್ನು ಮಧ್ಯ ಇರುವ ವ್ಯತ್ಯಾಸದ ಕುರಿತಾಗಿ ಹಿಂದೂ ಯುವತಿಯರು ಹಾಗೂ ಹಿಂದೂ ದೇವರು ಹಾಗೂ ಆಚರಣೆ ಕುರಿತು ಅಶ್ಲೀಲ ಬರಹವನ್ನು ಕಾಗವಾಡದ ಬಿಜೆಪಿ ಮುಖಂಡ ಹಾಗೂ ಚಿಕ್ಕೋಡಿ ಜಿಲ್ಲಾ ಅಲ್ಪಸಂಖ್ಯಾತರ ವಿಭಾಗದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಲ್ಲಾ ಎಂಬುವವರು ಅವಹೇಳನಕಾರಿ ಸಂದೇಶ ಹರಿಬಿಟ್ಟ ಪ್ರಕರಣ ಬಳಕೆಗೆ ಬಂದಿದೆ.
ಕಳೆದ ಮೂರು ದಿನಗಳ ಹಿಂದೆ ಕಾಗವಾಡ ತಾಲೂಕಿನ ಗ್ರಾಮ ಅಭಿವೃದ್ಧಿ ಎಂಬ ವಾಟ್ಸಪ್ ಗ್ರುಪ್ ನಲ್ಲಿ ಅಬ್ದುಲ್ ಮುಲ್ಲಾ ಎಂಬುವವರು ಸಂದೇಶ ಹರಿಬಿಟ್ಟಿದ್ದು, ಹಿಂದೂ ಯುವತಿಯರನ್ನು ಹಾಗೂ ಹಿಂದೂ ಸಂಪ್ರದಾಯವನ್ನು ಅವಹೇಳನಕಾರಿಯಾಗಿ ಬಿಂಬಿಸುವ ಸಂದೇಶವನ್ನು ಕಳುಹಿಸಿದ್ದಾರೆ. ಒಬ್ಬ ಬಿಜೆಪಿ ಮುಖಂಡ ಈ ರೀತಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ನಿಟ್ಟಿನಲ್ಲಿ ಸಂದೇಶ ಹರಿಬಿಟ್ಟಿದ್ದು ಎಷ್ಟು ಸರಿ ಎಂದು ಬಿಜೆಪಿ ಕಾರ್ಯಕರ್ತರು ಆಕ್ರೋಶ ಹೊರಹಾಕುತ್ತಿದ್ದಾರೆ.
ಪ್ರಮುಖವಾಗಿ ಈ ಸಂದೇಶ ಮರಾಠಿ ಭಾಷೆಯಲ್ಲಿದ್ದು ಹಿಜಾಬ್ ವಿಷಯವನ್ನು ಇಟ್ಟುಕೊಂಡು ದಿಕ್ಕು ತಪ್ಪಿರುವುದು ಹಿಂದೂ ಯುವತಿಯರು. ಮನೆ ಬಿಟ್ಟು ಹೊರಗೆ ಹೋಗುತ್ತಾರೆ. ಬೆರೆಯವರ ಜೊತೆ ಓಡಿ ಹೋಗುತ್ತಾರೆ. ಬಾರ್ ಪಬ್ ಸೇರಿದಂತೆ ಮುಂತಾದ ಸ್ಥಳಗಳಲ್ಲಿ ಸುತ್ತಾಡುತ್ತಾರೆ ಎಂಬಿತ್ಯಾದಿ ಸಂದೇಶ ಹರಿಬಿಟ್ಟಿದ್ದಾನೆ ಈ ಮುಖಂಡ.