ಪತ್ರಕರ್ತರಿಂದ ಗುರುನಾಥ ಕಡಬೂರಗೆ ಸನ್ಮಾನ
ಬೆಳಗಾವಿ : ಹುಬ್ಬಳ್ಳಿಯ ಪ್ರೇಮಜಿ ಫೌಂಡೇಶನ್ ಹಾಗೂ ಪಿ.ಆ್ಯಂಡ್.ಜಿ ಮೀಡಿಯಾ ಕಮ್ಯುನಿಕೇಷನ್ ವತಿಯಿಂದ ನೀಡಲಾಗುವ ಪ್ರೇಮ್ ಜೀ ಅಚೀವರ್ಸ್ ಅವಾರ್ಡ್–2025ಕ್ಕೆ ಭಾಜನರಾದ ಬೆಳಗಾವಿಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಗುರುನಾಥ ಕಡಬೂರ ಅವರನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬೆಳಗಾವಿ ಜಿಲ್ಲಾ ಘಟಕದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪತ್ರಕರ್ತ ಮೆಹಬೂಬ ಮಕಾನದಾರ, ಪತ್ರಿಕಾ ರಂಗದಲ್ಲೂ ಹಾಗೂ ಸರ್ಕಾರಿ ಅಧಿಕಾರಿಯಾಗಿ ಕಡಬೂರ ಅವರು ಸಲ್ಲಿಸಿರುವ ಅನುಪಮ ಸೇವೆಯನ್ನು ಗುರುತಿಸಿ ಪ್ರೇಮಜಿ ಫೌಂಡೇಶನ್ ಪ್ರಶಸ್ತಿ ನೀಡಿ ಗೌರವಿಸಿರುವುದು ಹೆಮ್ಮೆಯ ವಿಷಯವಾಗಿದೆ. ಭವಿಷ್ಯದಲ್ಲಿ ಅವರಿಗೆ ಇನ್ನೂ ಹೆಚ್ಚಿನ ಗೌರವಗಳು ಲಭಿಸಲಿ ಎಂದು ಶುಭ ಹಾರೈಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಗುರುನಾಥ ಕಡಬೂರ, ತಮ್ಮ ಸೇವೆಯನ್ನು ಗುರುತಿಸಿ ಪ್ರೇಮಜಿ ಫೌಂಡೇಶನ್ ಪ್ರಶಸ್ತಿ ನೀಡಿರುವುದಕ್ಕೆ ಕೃತಜ್ಞತೆ ಸಲ್ಲಿಸಿ, ಈ ಗೌರವವನ್ನು ಬೆಳಗಾವಿಯ ಪತ್ರಕರ್ತರಿಗೆ ಸಮರ್ಪಿಸುತ್ತೇನೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಶೈಲ ಮಠದ, ಉಪಾಧ್ಯಕ್ಷ ಕುಂತಿನಾಥ ಕಲಮನಿ, ಕಾರ್ಯದರ್ಶಿ ಸದಾಶಿವ ಸಂಕಪ್ಪಗೋಳ, ಏಕನಾಥ ಅಗಸಿಮನಿ, ಅರುಣ ಯಳ್ಳೂರಕರ, ಮಲ್ಲಿಕಾರ್ಜುನ ಮುಗಳಿ, ಪಿ.ಕೆ. ಬಡಿಗೇರ, ಸುಭಾನಿ ಮುಲ್ಲಾ, ವಾರ್ತಾ ಇಲಾಖೆಯ ಸಿಬ್ಬಂದಿಯಾದ ವಿಜಯಕುಮಾರ ಬೆಟಗೇರಿ, ಅನಂತ ಪಪ್ಪು, ಎಂ.ಎಲ್. ಜಮಾದಾರ, ಉಳವಯ್ಯ ಕೊಡಚಿಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.

