
ಗುಜರಾತ್ ಚುನಾವಣೆಯಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ : ಮುಂದುವರಿದ ಮೋದಿ ಕಮಾಲ್

ಗುಜರಾತ್ : ಇಡೀ ದೇಶದಲ್ಲಿಯೇ ಕುತೂಹಲ ಮೂಡಿಸಿರುವ ಗುಜರಾತ್ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಮತದಾನ ಪೂರ್ಣಗೊಂಡಿದ್ದು, ಯಾವ ಪಕ್ಷ ಅಧಿಕಾರದ ಗದ್ದುಗೆ ಏರಬಹುದು ಎಂಬ ಸಮೀಕ್ಷೆ ಹೊರಬಿದ್ದಿದೆ.
ಗುಜರಾತ್ ನಲ್ಲಿ ಮತದಾರ ಈ ಬಾರಿಯೂ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ನೇತೃತ್ವದ ಬಿಜೆಪಿ ಸರ್ಕಾರದ ಕೈಹಿಡಿಯುವ ಸಾಧ್ಯತೆ ಇದ್ದು, ಮತ್ತೊಮ್ಮೆ ಕಮಲ ಅರಳಲಿದೆ.
ಕಳೆದ 27 ವರ್ಷಗಳಿಂದ ಗುಜರಾತ್ ನಲ್ಲಿ ಬಿಜೆಪಿ ಅಧಿಕಾರದಲ್ಲಿದೆ. 1995 ರಿಂದ ನಿರಂತರವಾಗಿ ಬಿಜೆಪಿ ನೇತೃತ್ವದ ಸರ್ಕಾರವೇ ಇಲ್ಲಿ ಆಡಳಿತ ನಡೆಸುತ್ತಿದ್ದು ಜನರೂ ಕಮಲಕ್ಕೆ ಬೆಂಬಲ ಸೂಚಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ತವರು ಕ್ಷೇತ್ರ ಗುಜರಾತ್ ನಲ್ಲಿ ಈ ಬಾರಿಯೂ ಬಿಜೆಪಿ ಕಮಾಲ್ ಮುಂದುವರಿಯಲಿದ್ದು, ಚುನಾವಣಾ ಸಮೀಕ್ಷೆಗಳಿಂದ ಸಧ್ಯ ತಿಳಿದುಬರುತ್ತಿದೆ.
ಜನ್ ಕಿ ಬಾತ್ ಎಕ್ಸಿಟ್ ಪೋಲ್ ಪ್ರಕಾರ ಗುಜರಾತ್ ನಲ್ಲಿ ಬಿಜೆಪಿ 117-40 ಸ್ಥಾನ ಪಡೆದರೆ, ಕಾಂಗ್ರೆಸ್ 34-51 ಸ್ಥಾನ, | ಎಎಪಿ 6-13 ಹಾಗೂ ಇತರರು 1-2 ಸ್ಥಾನ ಪಡೆಯಲಿದ್ದಾರೆ.
ಪಿ-ಮಾರ್ಕ್ ಪ್ರಕಾರ, ಬಿಜೆಪಿ 128-148, ಕಾಂಗ್ರೆಸ್ 30-42, ಎಎಪಿ 2-10, ಇತರರು 0-3
ಟಿವಿ9 ಗುಜರಾತ್ ಸಮೀಕ್ಷೆ ಪ್ರಕಾರ, ಬಿಜೆಪಿ 125-130, ಕಾಂಗ್ರೆಸ್ 40-50, ಎಎಪಿ 3-5