
ಸುಬ್ಬ – ಬಳ್ಳಾರಿ ಜೈಲಿಗೆ ; ಸುಬ್ಬಿ – ಪರಪ್ಪನ ಅಗ್ರಹಾರಕ್ಕೆ, ಡಿ ಗ್ಯಾಂಗ್ ಬೇಲ್ ರದ್ದು

ನವದೆಹಲಿ : ರೇಣುಕಾ ಸ್ವಾಮಿ ಕೊಲೆ ಆರೋಪದಲ್ಲಿ ಸಿಲುಕಿರುವ ನಟ ದರ್ಶನ್ ಜಾಮೀನು ರದ್ದುಗೊಳಿಸಿ ಸುಪ್ರೀಂಕೋರ್ಟ್ ಮಹತ್ವದ ಆದೇಶ ಹೊರಡಿಸಿದ್ದು, ಸುಬ್ಬ, ಸುಬ್ಬಿ ಜೈಲು ಸೇರಲಿದ್ದಾರೆ.
ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಹಿನ್ನಲೆಯಲ್ಲಿ ತಕ್ಷಣವೇ ಸುಬ್ಬನನ್ನು ಬಳ್ಳಾರಿ ಜೈಲಿಗೆ ಹಾಗೂ ಸುಬ್ಬಿಯನ್ನು ಬೆಂಗಳೂರಿನ ಪರಪ್ಪನ ಅಗ್ರಹಾರಕ್ಕೆ ಕಳುಹಿಸುವ ತಯಾರಿ ನಡೆದಿದೆ.
ಕಳೆದ ಕೆಲ ದಿನಗಳಿಂದ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಗುರುವಾರ ಆದೇಶ ಹೊರಡಿಸಿದ್ದು, ನಟ ದರ್ಶನ್ ಜಾಮೀನು ಅರ್ಜಿ ವಜಾಗೊಳಿಸಿ ಆದೇಶ ನೀಡಿದ್ದು, ದಾಸನಿಗೆ ಮತ್ತೆ ಜೈಲುವಾಸ ಫಿಕ್ಸ್ ಆಗಿದೆ.