
ಆಟೋ ಚಾಲಕರ ತಿಕ್ಕಾಟ: ಕೇಂದ್ರ ಬಸ್ ನಿಲ್ದಾಣದ ಬಳಿ ಟ್ರಾಫೀಕೋ.. ಟ್ರಾಫೀಕು

ಬೆಳಗಾವಿ : ಕೇಂದ್ರ ಬಸ್ ನಿಲ್ದಾಣ ಹೈಟೆಕ್ ಆಗಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಸ್ಮಾರ್ಟ್ ಆಗುತ್ತಿದೆ. ಪಾಲಿಕೆಯಿಂದ ಸುಸಜ್ಜಿತ ಫುಟ್ ಫಾತ್ ನಿರ್ವಹಣೆ ಮಾಡುತ್ತಿದ್ದಾರೆ. ಪ್ರವಾಸಿ ಮಂದಿರದ ಎದುರುಗಡೆ ಇರುವ ರಸ್ತೆಯಲ್ಲಿ ಆಟೋ ಚಾಲಕರು ಅಡ್ಡಾದಿಡ್ಡಿ ವಾಹನಗಳನ್ನು ನಿಲ್ಲಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಆಟೋ ಚಾಲಕರಿಗೆ ಲಂಗು ಲಗಾಮಿಲ್ಲದ್ದಂತಾಗಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ನಿಲ್ದಾಣ ಮಾಡಿಕೊಂಡು ವಾಹನ ಸವಾರರಿಗೆ ಹಾಗೂ ಪ್ರಯಾಣಿಕರಿಗೆ ಕಿರಿಕಿರಿ ಮಾಡುತ್ತಿರುವ ದೂರುಗಳು ಸಾಮಾನ್ಯವಾಗಿವೆ.
ನಗರದ ಚನ್ನಮ್ಮ ವೃತ್ತದ ಬಳಿ ಇರುವ ಅಂಬೇಡ್ಕರ್ ಗಾಡ್೯ನ್, ಸಂಗೊಳ್ಳಿ ರಾಯಣ್ಣನ ವೃತ್ತ, ರಾಮದೇವ ಹೊಟೇಲ್, ಹನುಮಾನ ನಗರ, ಅಶೋಕ ವೃತ್ತ ಗಾಂಧಿ ನಗರದ ಪ್ರಮುಖ ರಸ್ತೆಯ ಪಕ್ಕ ಆಟೋ ನಿಲ್ದಾಣ ಮಾಡಿಕೊಂಡು ಸಂಚಾರ ಸಮಸ್ಯೆ ಮಾಡುತ್ತಿದ್ದಾರೆ. ಇವರಿಗೆ ಕಡಿವಾಣ ಹಾಕುವವರು ಯಾರು ಎನ್ನುವ ಪ್ರಶ್ನೆ ಸಾರ್ವಜನಿಕರಲ್ಲಿ ಕಾಡುತ್ತಿದೆ.
ನಗರದಲ್ಲಿ ಬೇಕಾಬಿಟ್ಟಿಯಾಗಿ ಆಟೋ ನಿಲ್ಲಿಸುವ ಚಾಲಕರಿಗೆ ನಗರ ಪೊಲೀಸ್ ಇಲಾಖೆ, ಆರ್ ಟಿಓ ಕಡಿವಾಣ ಹಾಕಿ ಮುಕ್ತ ಸಂಚಾರಕ್ಕೆ ಅವಕಾಶ ಮಾಡಿಕೊಡುವುದೇ ಕಾದುನೋಡಬೇಕಷ್ಟೆ.