
ಯುವತಿ ಆತ್ಮಹತ್ಯೆ ಯತ್ನದ ಪ್ರಕರಣಕ್ಕೆ ಟ್ವಿಸ್ಟ್ ; ನೌಟಂಕಿ ರಾಣಿಯ ನೂರೆಂಟು ಕಹಾನಿ

ಬೆಳಗಾವಿ : ಇಂಜಿನಿಯರ್ ಇದ್ದೇನೆಂದು ಲಕ್ಷ ಲಕ್ಷ ಸಂಬಳವಿದೆ ಎಂದು ನಂಬಿಸಿ ಮೋಸ ಮಾಡಿ ವಿವಾಹ ಆರೋಪಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು ಪತ್ನಿಯೇ ಪತಿಗೆ ಮೋಸ ಮಾಡಿದ ಸ್ಪೋಟಕ ವಿಷಯ ಬೆಳಕಿಗೆ ಬಂದಿದೆ.
ವರದಕ್ಷಿಣೆ ಕಿರುಕುಳ ಆರೋಪಿಸಿ ಮಹಿಳೆ ಆತ್ಮಹತ್ಯೆ ಯತ್ನ ಕೇಸ್‌ಗೆ ಟ್ವಿಸ್ಟ್ ಸಿಕ್ಕಿದ್ದು, ಪ್ರಕರಣ ಸಂಬಂಧ ಪ್ರತಿದೂರು ದಾಖಲಿಸಿದ ಆತ್ಮಹತ್ಯೆ ಯತ್ನಿಸಿದ ಮಹಿಳೆಯ ಮಾವ. ಪ್ರಕರಣದಲ್ಲಿ ರಮೇಶ್ ಜಾರಕಿಹೊಳಿ ಆಪ್ತ ಪೃಥ್ವಿ ಸಿಂಗ್ ಹೆಸರು ತಳಕು ಹಾಕಿಕೊಂಡಿದೆ.
ಆತ್ಮಹತ್ಯೆ ಯತ್ನಿಸಿದ್ದ ಕನ್ವಿಕಾ ಮಾವ ತಮ್ಣಣ್ಣರಿಂದ ಕೇಸ್ ಕನ್ವಿಕಾ ವಿರುದ್ಧ ಕೌಂಟರ್ ಕೇಸ್ ದಾಖಲಿಸಿದ ಕನ್ವಿಕಾ ಪತಿ ಗಣೇಶ ತಂದೆ ತಮ್ಮಣ್ಣ.ರಮೇಶ ಜಾರಕಿಹೊಳಿ ಆಪ್ತ ಪೃಥ್ವಿ ಸಿಂಗ್ ಹಾಗೂ ವಿವಾಹಿತೆ ಕನ್ವಿಕಾ ವಿರುದ್ಧ ದೂರು ದಾಖಲಾಗಿದೆ.
ಬೆಳಗಾವಿಯ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಗಣೇಶ ಪೋಷಕರು ಸ್ಕೂಲ್ ಮೇಟ್ಸ್ ಆಗಿದ್ದ ಗಣೇಶ ಹಾಗೂ ಕನ್ವಿಕಾ, ಶಾಲಾ ದಿನಗಳಲ್ಲೇ ಇಬ್ಬರ ನಡುವೆ ಸ್ನೇಹ ಇತ್ತು. ಗಣೇಶ-ಕನ್ವಿಕಾ ಪ್ರೀತಿಸುತ್ತಿದ್ದಾರೆ, ಮದುವೆ ಮಾಡಿಕೊಳ್ಳುವಂತೆ ಪೃಥ್ವಿಸಿಂಗ್ ಕಿರುಕುಳ ಮಾಡಿದ್ದಾರೆ ಎಂಬ ಆರೋಪ ಗಣೇಶ ಕುಟುಂಬಸ್ಥರು ಮಾಡಿದ್ದಾರೆ.
ಗಣೇಶ ಪೋಷಕರಿಗೆ ಜೀವ ಬೆದರಿಕೆ ಹಾಕಿ ಗಣೇಶ ಜೊತೆಗೆ ಕನ್ವಿಕಾ ವಿವಾಹ ಮಾಡಿಸಿದ್ದ ಆರೋಪ ಈಗ ಬಂದಿದೆ.
ಮದುವೆ ನಂತರವೂ ಕನ್ವಿಕಾ ಗಾಂಜಾ, ಸಿಗರೆಟ್, ಮದ್ಯ ಸೇವಿಸುತ್ತಿದ್ದಳೆಂದು ಆರೋಪ ಮಾಡಿರುವ ಅವರು ಗಾಂಜಾ, ಸಿಗರೇಟ್, ಮದ್ಯದ ಬಾಟಲಿ ಜೊತೆಗೆ ಕನ್ವಿಕಾ ಇರುವ ಫೋಟೊಗಳು ರಿಲೀಸ್ ಮಾಡಿದ್ದಾರೆ.
ಅನ್ಯ ಯುವಕರ ಜತೆಗೆ ಕನ್ವಿಕಾ ಅಕ್ರಮ ಸಂಬಂಧ ಹೊಂದಿರುವ ಬಗ್ಗೆಯೂ ಆರೋಪ ಮಾಡಿದ್ದಾರೆ.ಪತಿ ಗಣೇಶ ಹಾಗೂ ಪೋಷಕರಿಗೆ ಮಾಹಿತಿ ನೀಡದೇ ಎರಡ್ಮೂರು ದಿನ ಟ್ರಿಪ್‌ಗೆ ಹೋಗುತ್ತಿದ್ದಳು ಈ ಕನ್ವಿಕಾ ಎಲ್ಲಿಗೆ ಹೋಗಿದ್ದೆ ಎಂದು ಪ್ರಶ್ನಿಸಿದ್ದ ಗಣೇಶ ಪೋಷಕರಿಗೆ ಪೃಥ್ವಿ ಸಿಂಗ್ ಹಾಗೂ ಸಹಚರರಿಂದ ಧಮ್ಕಿ ಹಾಕಿದ್ದಾನೆ ಎಂದು ದೂರಿದ್ದಾರೆ.
ಗಣೇಶ ಮನೆಗೆ ಅಕ್ರಮ ಪ್ರವೇಶ ಮಾಡಿರುವ ಬಗ್ಗೆ ಪೃಥ್ವಿಸಿಂಗ್ ವಿರುದ್ಧ ದೂರಿನಲ್ಲಿ ಉಲ್ಲೇಖ ಮಾಡಿದ್ದು, ದುಷ್ಚಟಗಳಿಗೆ ಅಂಟಿಕೊಂಡು ತನ್ನಷ್ಟಕ್ಕೇ ತಾನೇ ಕನ್ವಿಕಾ ಆತ್ಮಹತ್ಯೆಗೆ ಯತ್ನಿಸಿದ್ದಾಳೆಂದು ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.