
ಬೆಳಗಾವಿ : ಬುದ್ಧಿಮಾಂದ್ಯ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನ ; ಅನ್ಯಕೋಮಿನ ಯುವಕನ ವಿರುದ್ಧ ರೊಚ್ಚಿಗೆದ್ದ ಜನ

ಬೆಳಗಾವಿ : ಅಪ್ರಾಪ್ತೆ ಬುದ್ಧಿಮಾಂದ್ಯ ಯುವತಿಯ ಮೇಲೆ ಅನ್ಯಕೋಮಿನ ಯುವಕನೋರ್ವ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಬೆಳಗಾವಿ ತಾಲೂಕಿನ, ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಗ್ರಾಮದಲ್ಲಿ ಪ್ರಕ್ಷ್ಯುಬ್ಧ ವಾತಾರಣ ನಿರ್ಮಾಣವಾಗಿದೆ.
ಬುಧವಾರ ಬೆಳಗಾವಿ ತಾಲೂಕಿನ ಕಾಕತಿ ಪೊಲೀಸ್ ಠಾಣೆ ವ್ಯಾಪ್ತಿಯ ವ್ಯಕ್ತಿಯೋರ್ವ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.
ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಈತ ಯುವತಿಯ
ಮನೆಗೆ ತೆರಳಿ ಮೈ ಮುಟ್ಟುವ ಸಂದರ್ಭದಲ್ಲಿ ಯುವತಿ ಕಿರುಚಾಡಿದ್ದಾಳೆ. ಆಗ ಯುವತಿಯ ಚಿಕ್ಕಪ್ಪ ಒಳಗೆ ಬಂದು ನೋಡಿದಾಗ ಆರೋಪಿ ಸಿಕ್ಕಿಬಿದ್ದಿದ್ದಾನೆ.
ಅತ್ಯಾಚಾರಕ್ಕೆ ಯತ್ನಿಸಿದ ವ್ಯಕ್ತಿಯನ್ನು ಯುವತಿ ಕುಟುಂಬದವರು ಚನ್ನಾಗಿ ಥಳಿಸಿದ್ದಾರೆ. ಈ ಸಂದರ್ಭದಲ್ಲಿ ಆರೋಪಿ ಪ್ರಜ್ಞೆ ತಪ್ಪಿದಂತೆ ನಾಟಕ ಮಾಡಿ ಸಿನಿಮೀಯ ರೀತಿಯಲ್ಲಿ ತಪ್ಪಿಸಿಕೊಂಡಿದ್ದಾನೆ. ಈ ಸಂದರ್ಭದಲ್ಲಿ ಯುವತಿಯ ಜೊತೆ ಠಾಣೆಗೆ ಬಂದ ಆಕೆಯ ಚಿಕ್ಕಪ್ಪ ದೂರು ದಾಖಲಿಸಿದ್ದಾನೆ.
ಘಟನೆ ಕುರಿತು ಗ್ರಾಮಸ್ಥರು ಹಾಗೂ ಯುವತಿಯ ಸಂಬಂಧಿಕರು ಕಾಕತಿ ಪೊಲೀಸ್ ಠಾಣೆ ಹತ್ತಿರ ಜಮಾಯಿಸಿದ್ದಾರೆ. ಪರಿಸ್ಥಿತಿ ತಿಳಿಗೊಳಿಸುವ ಉದ್ದೇಶದಿಂದ
ಹಿರಿಯ ಅಧಿಕಾರಿಗಳು ಕಾಕತಿ ಪೊಲೀಸ್ ಠಾಣೆಗೆ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸುವ ಕೆಲಸ ಮಾಡಿದ್ದಾರೆ. ಜೊತೆಗೆ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.