
ಬೆಳಗಾವಿ ಪೋರನಿಗೆ ಹಿಂದುಸ್ತಾನ್ ರತ್ನ ಪ್ರಶಸ್ತಿ

ಬೆಳಗಾವಿ : ಕುಂದಾನಗರಿ ಪೋರ ಹಾಗೂ ಮಾಡೆಲ್ ಆಯುಶ್ ಹೊಸಕೋಟಿ ಅವರಿಗೆ ಮುಂಬೈ ಗ್ಲೋಬಲ್ ಪ್ರೆಜೆನ್ಸ್ ವತಿಯಿಂದ ಕೊಡಮಾಡುವ ಹಿಂದುಸ್ತಾನ್ ರತ್ನ ಪ್ರಶಸ್ತಿ ದೊರಕಿದೆ.
ಅತ್ಯುತ್ತಮ ಮಕ್ಕಳ ಮಾಡೆಲಿಂಗ್ ವಿಭಾಗದಲ್ಲಿ ಆಯುಶ್ ಹೊಸಕೋಟಿ ಅವರಿಗೆ ಈ ಪ್ರಶಸ್ತಿ ಲಭಿಸಿದೆ. ನಾಳೆ ಸೋಮವಾರ ಮೇ 9 ರಂದು ಮುಂಬೈ ಕ್ಲಬ್ ನಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ. ಈ ಸಂದರ್ಭದಲ್ಲಿ ಖ್ಯಾತ ನಿರ್ದೇಶಕರು ಹಾಗೂ ನಟ, ನಟಿಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
