ನನ್ನ ಸಾವಿಗೆ ಇವರೇ ಕಾರಣ ; ಮೃತ ನೌಕರ ಹಾಕಿದ್ದ ಮೆಸೇಜ್ ನಲ್ಲಿ ಏನಿತ್ತು…?
ಬೆಳಗಾವಿ : ಬೆಳಗಾವಿ ತಹಶಿಲ್ದಾರ ಕಚೇರಿಯಲ್ಲೇ ದ್ವಿತೀಯ ದರ್ಜೆ ಸಹಾಯಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಿಂದೆ ಮೂವರು ಹೆಸರು ಕೇಳಿಬಂದಿದೆ.
ನಗರದ ರಿಸಾಲ್ದಾರ ಗಲ್ಲಿಯಲ್ಲಿಯುವ ತಹಶಿಲ್ದಾರ ಕಚೇರಿಯಲ್ಲಿ ನೌಕರ ರುದ್ರಣ್ಣ ಯಡವಣ್ಣವರ ( 35 ) ಆತ್ಮಹತ್ಯೆಗೆ ಶರಣಾದ ಘಟನೆಗೂ ಮೊದಲೆ ಹಾಕಿರುವ ಆ ಒಂದು ಮೆಸೇಜ್ ವೈರಲ್ ಆಗುತ್ತಿದೆ.
ನನ್ನ ಸಾವಿಗೆ ತಹಶಿಲ್ದಾರ ಬಸವರಾಜ ನಾಗರಾಳ, ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆಪ್ತ ಸಹಾಯಕ ಸೋಮು ದೊಡವಾಡಿ ಹಾಗೂ ಇನ್ನೊಬ್ಬ ನೌಕರ ಅಶೋಕ್ ಕಬ್ಬಲಿಗೇರ್ ಕಾರಣ ಎಂದು ಮೆಸೇಜ್ ಹಾಕಿದ್ದಾರೆ.
ಬೆಳಗಾವಿ ತಹಶಿಲ್ದಾರ ಕಚೇರಿ ಸಿಬ್ಬಂದಿ ಇರುವ ವಾಟ್ಸಪ್ ಗ್ರುಪ್ ನಲ್ಲಿ ಸೋಮವಾರ ರಾತ್ರಿ ಸಂದೇಶ ಕಳುಹಿಸಿರುವ ಮೃತ ನೌಕರ ರುದ್ರಣ್ಣ ಯಡವಣ್ಣವರ ನಂತರ ಮಂಗಳವಾರ ಬೆಳಿಗ್ಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ.
ವರ್ಗಾವಣೆ ವಿಚಾರವಾಗಿ ಲಕ್ಷ್ಮೀ ಹೆಬ್ಬಾಳಕರ್ ಆಪ್ತ ಸಹಾಯಕ ಸೋಮು ಎರಡು ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ ಇದನ್ನು ಮೃತ ರುದ್ರಣ್ಣ ಕೊಟ್ಟಿದ್ದರು, ಆದರೆ ಸೋಮವಾರ ವರ್ಗಾವಣೆ ಆದ ಹಿನ್ನಲೆಯಲ್ಲಿ ಇತ್ತ ಹಣ ಇಲ್ಲ, ಅತ್ತ ವರ್ಗಾವಣೆಯಿಂದ ಮನನೊಂದಿದ್ದಾನೆ.