ದೇಶದ ವಿರುದ್ಧ ಮಾತನಾಡುವವರ ಬಾಯಿ ಮುಚ್ಚಿಸಬೇಕು : ಡಾ. ಮಹಾಂತಪ್ರಭು ಸ್ವಾಮೀಜಿ
ಅಥಣಿ : ಜಗತ್ತಿನಲ್ಲೇ ಅತ್ಯಂತ ಶ್ರೀಮಂತ ಪರಂಪರೆ ನಮ್ಮ ಭಾರತ. ಈ ದೇಶದ ಪುಣ್ಯ ಭೂಮಿಯ ಅವಹೇಳನ ಮಾಡುವ ಯಾವುದೇ ವ್ಯಕ್ತಿಯನ್ನು ಕಪಾಳಕ್ಕೆ ಹೊಡೆದು ವಿರೋಧಿಸುವ ಗುಣವನ್ನು ಪ್ರತಿಯೊಬ್ಬರು ಬೆಳೆಸಿಕೊಂಡಾಗ ಮಾತ್ರ, ಸ್ವಾತಂತ್ರ್ಯ ಹೊರಾಟಗಾರರಿಗೆ ನಿಜವಾದ ಗೌರವ ಸಲ್ಲಿಸಿದಂತೆ ಎಂದು ಡಾ. ಮಹಾಂತ ಪ್ರಭು ಸ್ವಾಮೀಜಿ ಹೇಳಿದರು.
ಅದಮ್ಯ ಫೌಂಡೇಶನ್ ಹಾಗೂ ಅಂತರ್ಯಾಮಿ ಫೌಂಡೇಶನ್ ಸಹಯೋಗದಲ್ಲಿ ತಾಲೂಕಿನ ಸಪ್ತಸಾಗರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದ ಸ್ವಾತಂತ್ರ್ಯ ಹಬ್ಬ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಶೇಗುಣಸಿ ವಿರಕ್ತ ಮಠದ ಮಹಾಂತಪ್ರಭು ಸ್ವಾಮೀಜಿ. ಈ ದೇಶದ ಸ್ವಾತಂತ್ರ್ಯ ಅದೆಷ್ಟೋ ಬಲಿದಾನಗಳಿಂದ ಬಂದಿದೆ. ಇಂದಿನ ಯುವಕರು ತಮ್ಮ ಕ್ರಿಯಾಶೀಲತೆಯನ್ನು ದೇಶದ ಅಭಿವೃದ್ಧಿಗೆ ಬಳಸಿಕೊಳ್ಳಬೇಕು. ಶಿಸ್ತು ಹಾಗೂ ದೇಶಭಕ್ತಿ ರೂಢಿಸಿಕೊಂಡು ಬದುಕು ಕಟ್ಟಿಕೊಳ್ಳಬೇಕು. ಶಿಕ್ಷಕರು ಮಕ್ಕಳ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.
ಅಥಣಿ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ ಮಾತನಾಡಿ. ಸರಳತೆಯಿಂದ ಮಹಾತ್ಮ ಗಾಂಧಿ ಇಡೀ ಜಗತ್ತನ್ನೇ ಆಳಿದವರು. ಅಂತಹ ಮಹಾನ್ ಪುರುಷರ ಬಲಿದಾನದಿಂದ ನಮ್ಮ ದೇಶ ಸ್ವಾತಂತ್ರ್ಯ ಪಡೆಯಲು ಸಾಧ್ಯವಾಯಿತು. ದೇಶದ 75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ನಾವೆಲ್ಲ ಇರುವುದು ಪುಣ್ಯ. ದೇಶ ಕಟ್ಟುವಲ್ಲಿ ಅದಮ್ಯ ಹಾಗೂ ಅಂತರ್ಯಾಮಿ ಫೌಂಡೇಶನ್ ಗಳು ಅದ್ಬುತ ಕಾರ್ಯ ನಡೆಸುತ್ತಿವೆ ಎಂದರು. ಪ್ರಾಂಶುಪಾಲ ಚಂದ್ರಶೇಖರ ಲಮಾನಿ. ಇಂದಿನ ಮಕ್ಕಳಿಗೆ ಸ್ವಾತಂತ್ರ್ಯ ಹಾಗೂ ಬಲಿದಾನದ ಮಹತ್ವ ಹೇಳಿಕೊಡಬೇಕು. ಈ ಕೆಲಸವನ್ನು ಇಂದಿನ ಯುವ ಸಮೂಹ ಮಾಡುತ್ತಿರುವುದು ವಿಶೇಷ ಎಂದರು.
ವಿದ್ಯಾರ್ಥಿಗಳಿಗೆ ನಡೆಸಿದ್ದ ಭಾಷಣ, ರಸಪ್ರಶ್ನೆ ಹಾಗೂ ಗಾಯನ ಸ್ಪರ್ಧೆಗಳ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ರಾವಸಾಬ ಸಂಗಲಗಿ, ಅದಮ್ಯ ಫೌಂಡೇಶನ್ ಅಧ್ಯಕ್ಷ ಮಹೇಶ್ ನರಗಟ್ಟಿ, ಅಂತರ್ಯಾಮಿ ಫೌಂಡೇಶನ್ ಅಧ್ಯಕ್ಷ ನಾಗರಾಜ ಗಸ್ತಿ, ಪತ್ರಕರ್ತ ವಿನಾಯಕ ಮಠಪತಿ, ಮಲ್ಲಿಕಾರ್ಜುನ ಆಸಂಗಿ. ಶಿಕ್ಷಕರಾದ ಬಾಹುಬಲಿ ಸಂಕ್ರಟ್ಟಿ, ಮಹಾಂತೇಶ್ ಗುಳಪ್ಪಣವರ ಸೇರಿದಂತೆ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಾಜರಿದ್ದರು. ಕಂಬಾರ ಶಿಕ್ಷಕರು ವಂದಿಸಿ ಕಾರ್ಯಕ್ರಮ ನಿರೂಪಿಸಿದರು.
ಹರ್ ಘರ್ ತಿರಂಗಾ ಅಭಿಯಾನಕ್ಕೆ ಸಾಂಕೇತಿಕ ಚಾಲನೆ
75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿರುವ ಮನೆ ಮನೆಗೂ ಧ್ವಜ ಅರ್ಯಕ್ರಮಕ್ಕೆ ಮಹಾಂತಪ್ರಭು ಸ್ವಾಮೀಜಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾ ಬಸವರಾಜ ತಳವಾರ ಸಾಂಕೇತಿಕವಾಗಿ ಚಾಲನೆ ನೀಡಿದರು. ತ್ರಿವರ್ಣ ಧ್ವಜವನ್ನು ಪ್ರದರ್ಶನ ಮಾಡಿ ಶಾಲಾ ಮಕ್ಕಳಲ್ಲಿ ಜಾಗ್ರತಿ ಮೂಡಿಸಲಾಯಿತು.