ಕನ್ನಡದ ಕಟ್ಟಾಳುವಿಗೆ ಅಪರೂಪದ ಸನ್ಮಾನ
ಬೆಳಗಾವಿ : ಕುಂದಾನಗರಿಯ ನಡೆದಾಡುವ ವಿಶ್ವಕೋಶ ಎಂದೇ ಖ್ಯಾತರಾಗಿರುವ, ನಿರಂತರ ಕನ್ನಡ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಅಶೋಕ ಚಂದರಗಿ ಅವರಿಗೆ ರಾಜ್ಯ ವಿಧಾನ ಮಂಡಲದ ವತಿಯಿಂದ ಅಪರೂಪದ ಸನ್ಮಾನ ನೆರವೇರಲಿದೆ.
ಕನ್ನಡಕ್ಕಾಗಿ ಅಶೋಕ ಚಂದರಗಿ ಅವರು ಕನ್ನಡಕ್ಕಾಗಿ ಸಲ್ಲಿಸಿರುವ ಸೇವೆಗಾಗಿ ರಾಜ್ಯ ವಿಧಾನ ಮಂಡಲದ
ವತಿಯಿಂದ ವಿಧಾನ ಸೌಧದ ಬಾಂಕ್ವೆಟ್ ಹಾಲ್ ನಲ್ಲಿ ನವ್ಹೆಂಬರ್ 1 ರಂದು ವಿಶೇಷ ಸನ್ಮಾನ ಹಮ್ಮಿಕೊಳ್ಳಲಾಗಿದೆ.
ಕರ್ನಾಟಕ ರಾಜ್ಯೋತ್ಸವ ಹಿನ್ನಲೆಯಲ್ಲಿ ವಿಶೇಷವಾಗಿ ಈ ಸನ್ಮಾನ ನಡೆಯಲಿದ್ದು ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ಸಭಾಧ್ಯಕ್ಷ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ನೇತೃತ್ವದಲ್ಲಿ ಈ ಸನ್ಮಾನ ಕಾರ್ಯಕ್ರಮ ನೆರವೇರಲಿದೆ. ಈಗಾಗಲೇ ಈ ಕುರಿತು ಅಧಿಕೃತ ಆಹ್ವಾನ ಸನ್ಮಾನಿತರಿಗೆ ಕಳುಹಿಸಲಾಗಿದೆ.
ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ
ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಅಶೋಕ ಚಂದರಗಿ ಕನ್ನಡ ಕೆಲಸಕ್ಕೆ ಸದಾ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ನಿರಂತರ ಕನ್ನಡಪರ ಧ್ವನಿ ಎತ್ತುವ ಇವರಿಗೆ ಸನ್ಮಾನ ನೆರವೇರುತ್ತಿದ್ದು, ಗಡಿನಾಡ ಕನ್ನಡಿಗರಿಗೆ ಹೆಮ್ಮೆಯ ಸಂಗತಿ.