
VIDEO : ಬೈಕ್ ಡಿಕ್ಕಿಯಾಗಿದ್ದಕ್ಕೆ ನಡುರಸ್ತೆಯಲ್ಲೇ ಹೊಡೆದು ಕೊಂದ ಹಂತಕ

ಬೆಳಗಾವಿ : ಪಾದಚಾರಿಗೆ ಬೈಕ್ ಡಿಕ್ಕಿ ಹೊಡೆದಿದ್ದಕ್ಕೆ ಆಕ್ರೋಶಗೊಂಡ ವ್ಯಕ್ತಿ ಬೈಕ್ ಸವಾರನನ್ನು ಮನಬಂದಂತೆ ಹೊಡೆದು ನಡುರಸ್ತೆಯಲ್ಲೇ ಹತ್ಯೆ ಮಾಡಿರುವ ಘಟನೆ ಚನ್ನಮ್ಮ ಕಿತ್ತೂರಿನಲ್ಲಿ ನಡೆದಿದೆ.
ಬೈಕ್ ಸವಾರ ವಿಜಯಮಹಾಂತೇಶ್ ಹಿರೇಮಠ (67) ಎಂಬುವರು ಬೈಕ್ ಮೇಲೆ ತೆರಳುವಾಗ ಅಚಾನಕ್ಕಾಗಿ ಪಾದಚಾರಿಗೆ ಡಿಕ್ಕಿ ಹೊಡೆದಿದೆ. ಇದಕ್ಕೆ ಕುಪಿತಗೊಂಡ ಕಿತ್ತೂರು ತಾಲೂಕಿನ ಮಲ್ಲಾಪುರ ಗ್ರಾಮದ ಅದೃಶ್ಯ ಎಂಬಾತ ಸವಾರನನ್ನು ಹತ್ಯೆ ಮಾಡಿದ್ದಾನೆ.
ವಿಜಯಮಹಾಂತೇಶ ಹಿರೇಮಠ ಎಂಬುವವರು ಬೈಕ್ ಮೇಲೆ ಹೋಗುತ್ತಿದ್ದಾಗ ಹಿಂಬದಿಯಿಂದ ಕಾರೊಂದು ಡಿಕ್ಕಿ ಹೊಡೆದಿದೆ. ಆಗ ನಿಯಂತ್ರಣ ತಪ್ಪಿದ ಬೈಕ್ ಪಾದಚಾರಿ ಅದೃಶ್ಯಗೆ ಗುದ್ದಿದೆ. ಇದರಿಂದ ಕುಪಿತನಾದ ಅದೃಶ್ಯ ಹಾಗೂ ಆತನ ಸ್ನೇಹಿತರು ಸವಾರನ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆಯಿಂದ ಅಸ್ವಸ್ಥತರಾದ ವಿಜಯ್ ಹಿರೇಮಠ ಸ್ಥಳದಲ್ಲೇ ಮೃತಪಟ್ಟಿದ್ದಾರೆ.