
ಈವರೆಗೆ ಆ್ಯಂಕರ್ ಅನುಶ್ರೀ ಮದುವೆ ಆಗದಿರುವ ಕಾರಣ ಏನು ಗೊತ್ತಾ…?

ಬೆಂಗಳೂರು : ಕನ್ನಡದ ಖ್ಯಾತ ಆ್ಯಂಕರ್ ಹಗೂ ರಿಯಾಲಿಟಿ ಶೋ ಗಳಿಂದಲೇ ಪ್ರಸಿದ್ಧಿ ಪಡೆದಿರುವ ಮಂಗಳೂರು ಬೆಡಗಿ ಅನುಶ್ರೀ ಅವರು ಈವರೆಗೂ ಮದುವೆಯಾಗಿಲ್ಲ. ತಮ್ಮ ಕುಟುಂಬದಲ್ಲಾದ ಕೆಟ್ಟ ಘಟನೆಯಿಂದ ಅನುಶ್ರೀಗೆ ಮದುವೆ ಎಂದರೆ ಒಂದು ರೀತಿಯಲ್ಲಿ ಬೇಡ ಎಂಬ ಪರಿಸ್ಥಿತಿಗೆ ಬಂದಿದ್ದರು.
ಬದುಕಿನಲ್ಲಿ ಯಾವ ಹೆಣ್ಣಿಗೆ ತಾನು ಸಂಸಾರದ ಸುಂದರ ಸಾಗರದಲ್ಲಿ ಈಜಬೇಕು ಎಂಬ ಬಯಕೆ ಇರುವುದಿಲ್ಲ ಹೇಳಿ. ಅದರಂತೆಯೆ ಪ್ರತಿ ಹೆಣ್ಣು ತಾನೂ ಮದುವೆಯಾಗಿ ಸುಂದರ ಸಂಸಾರ ನಡೆಸಬೇಕೆಂಬ ಆಸೆ ಹೊಂದಿರುತ್ತಾಳೆ. ಆದರೆ ಅನುಶ್ರೀ ಅವರ ಬದುಕಿನಲ್ಲಾದ ಕೆಟ್ಟ ಘಟನೆಯೊಂದು ಅವರನ್ನು ಗಟ್ಟಿ ಮಾಡಿದೆ.
ತಮ್ಮ ಮದುವೆ ಕುರಿತು ಅನುಶ್ರೀ ಅಭಿಪ್ರಾಯ ಹಂಚಿಕೊಂಡಿದ್ದು. ನನ್ನ ತಂದೆ-ತಾಯಿಯ ದಾಂಪತ್ಯದ ಕಹಿ ಅನುಭವವನ್ನು ಕಣ್ಣಾರೆ ಕಂಡಿದ್ದ ನನಗೆ ಮದುವೆ ಎಂದರೆ ನೋವು ತರುವ ಸಂಗತಿಯಾಗಿತ್ತು.
ನಾನು ನನ್ನ ಮದುವೆ ಬಗ್ಗೆ ಯೋಚಿಸಿದಾಗಲೆಲ್ಲಾ ನನಗೆ ಮದುವೆ-ದಾಂಪತ್ಯ ಇವೆಲ್ಲಾ ನನಗೆ ಬೇಡವೇ ಬೇಡ. ನನ್ನ ಅಮ್ಮ-ಅಪ್ಪನ ಸಂಸಾರದ ಸುಖದ ಹಣೆಬರಹವನ್ನು ನೋಡಿದ್ದಾಗಿದೆ, ಸಾಕು’ ಎನಿಸುತ್ತಿತ್ತು ಎಂದು ಹೇಳಿದ್ದಾರೆ.
ನನ್ನದೇ ಪೋಷಕರ ಮುರಿದ ಬಿದ್ದ ಮದುವೆ ನೋಡಿದ ಮೇಲೂ ನನಗೆ ಮದುವೆ ಆಗಬೇಕೆಂಬ ಕನಸು ಕಾಣುವುದರಲ್ಲಿ ಅರ್ಥವೇ ಇಲ್ಲ ಎನ್ನಿಸುತ್ತಿತ್ತು. ಆದರೆ ಈಗ, ವರ್ಷಗಳು ಉರುಳುತ್ತಿವೆ. ನನಗೂ ವಯಸ್ಸಾಗುತ್ತಿದೆ. ಎಲ್ಲರ ಜೀವನದಲ್ಲೂ ಮದುವೆ ಕಹಿ ಘಟನೆ ಆಗಲೇಬೇಕು ಎಂದೇನಿಲ್ಲ,
ಅದು ಸುಮಧುರ ಕೂಡ ಆಗಬಹುದು ಎನ್ನಿಸುತ್ತಿದೆ. ಹೀಗಾಗಿ ನಾನು ಮದುವೆಯಾಗಲು ನಿರ್ಧರಿಸಿದ್ದೇನೆ. ಮದುವೆಯೇ ಬೇಡ ಎನ್ನುತ್ತಿದ್ದವಳು ಮದುವೆಗೆ ಗ್ರೀನ್ ಸಿಗ್ನಲ್ ನೀಡಿಬಿಟ್ಟಿದ್ದೇನೆ ಎಂದು ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.
ನನಗೆ ಇದು ಎರಡನೇ ಅಥವಾ ಮೂರನೇ ಮದುವೆ ಅಲ್ಲ. ನನಗೆ ಇನ್ನೂ ಮದುವೆಯೇ ಆಗಿಲ್ಲ ಎಂದು ಆಂಕರ್ ಅನುಶ್ರೀ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಈ ಹಿಂದೆ ನನಗೆ ಬಹಳಷ್ಟು ಜನರು ಈಗಾಗಲೇ ಮದುವೆ ಮಾಡಿಸಿಬಿಟ್ಟಿದ್ದೀರಿ.
ಒಮ್ಮೆ ನಟ ರಕ್ಷಿತ್ ಶೆಟ್ಟಿ ಜೊತೆ ಮದುವೆ ಮಾಡಿಸಿದ್ದೀರಿ. ಇನ್ನೊಮ್ಮೆ ನನ್ನ ಕಸಿನ್ ಗಂಡನ ಜೊತೆಯಲ್ಲೂ ಆಗಿಹೋಗಿದೆಯಂತೆ. ಅದನ್ನು ನನ್ನ ಕಸಿನ್ ಕಾಲ್ ಮಾಡಿ ಹೇಳಿ ನಕ್ಕಿದ್ದಾಳೆ. ಆದರೆ, ನನಗೆ ನಿಜವಾಗಿಯೂ ಮದುವೆ ಆಗಿಲ್ಲ ಎಂದು ತಿಳಿಸಿದ್ದಾರೆ.