
ಕೊಲೆ ಪ್ರಕರಣ ; ಶವ ಸಾಗಿಸಲು 30 ಲಕ್ಷ ರೂ. ಗೆ ಡೀಲ್ ಮಾಡಿದ್ದ ಆರೋಪಿಗಳು….?

ಬೆಂಗಳೂರು : ನಟಿ ಪವಿತ್ರ ಗೌಡಗೆ ಮೆಸೇಜ್ ಮಾಡಿದ್ದಕ್ಕೆ ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಎಂಬುವವರನ್ನು ನಟ ದರ್ಶನ್ ಕೊಲೆ ಮಾಡಿದ ಪ್ರಕರಣ ಅನೇಕ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಮೃತ ವ್ಯಕ್ತಿಯ ಶವ ಸಾಗಿಸಲು 30 ಲಕ್ಷಕ್ಕೆ ಡೀಲ್ ಮಾಡಲಾಗಿತ್ತು ಎಂಬ ಅಂಶ ಬೆಳಕಿಗೆ ಬರುತ್ತಿದೆ.
ಪ್ರಕರಣದ ಪ್ರಮುಖ ಆರೋಪಿಗಳು ತನಿಖೆಯಲ್ಲಿ ಬಾಯಿ ಬಿಟ್ಟಿದ್ದು, ಮೃತ ವ್ಯಕ್ತಿಯ ಶವ ಸಾಗಿಸಲು 30 ಲಕ್ಷಕ್ಕೆ ಡೀಲ್ ಪಡೆಯಲಾಗಿತ್ತು ಎಂಬ ಆಘಾತಕಾರಿ ಅಂಶ ಹೊರಹಾಕಿದ್ದಾರೆ.
ಈ ಕೊಲೆ ಪ್ರಕರಣದ ದಿಕ್ಕು ತಪ್ಪಿಸುವ ಉದ್ದೇಶದಿಂದ ಆರೋಪಿತರು ಹಣಕಾಸು ವಿಚಾರದಲ್ಲಿ ಈ ಕೊಲೆ ನಡೆದಿದೆ ಎಂದು ಬಿಂಬಿಸಲು ಹೊರಟಿದ್ದರು ಎಂದು ತಿಳಿದುಬಂದಿದೆ.
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬುವವರನ್ನು ಬೆಂಗಳೂರಿಗೆ ಕರೆ ತರಲಾಗಿತ್ತು. ನಂತರ ಪಟ್ಟಣಗೆರೆ ಜಯಣ್ಣ ಎಂಬುವವರ ಶೆಡ್ ನಲ್ಲಿ ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿದೆ. ಈ ಸಂದರ್ಭದಲ್ಲಿ ನಟ ದರ್ಶನ್ ಶೆಡ್ ಗೆ ಎರಡು ಬಾರಿಗೆ ಬಂದು ಹೋಗಿದ್ದು ಸಿಸಿಟಿವಿಯಲ್ಲಿ ಗೊತ್ತಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹತ್ತು ಜನ ಆರೋಪಿಗಳನ್ನು ಬಂಧಿಸಲಾಗಿದ್ದು, ಇನ್ನೂ ನಾಲ್ವರು ತಲೆಮರೆಸಿಕೊಂಡಿದ್ದಾರೆ. ಜೊತೆಗೆ ಪ್ರಕರಣದ ಎ೧ – ಆರೋಪಿ ಪವಿತ್ರ ಗೌಡ ಹಾಗೂ ಎ೨ – ಆರೋಪಿ ನಟ ದರ್ಶನ್ ಆಗಿದ್ದಾನೆ.