ಬೆಳಗಾವಿ : ಬೆಳಗಾವಿ ತಾಲೂಕಿನ ಮಚ್ಚೆಯಲ್ಲಿ ಗಂಡನ ಮೇಲೆ ಹೆಂಡತಿ ಸುಡುವ ಎಣ್ಣೆ ಸುರಿದು ಕೊಲೆ ಮಾಡಲು ಯತ್ನಿಸಿರುವ ಘಟನೆ ಮಂಗಳವಾರ ನಡೆದಿದೆ.

ಗಂಡ ಸುಭಾಷ್ ಪಾಟೀಲ್ (55) ಮೇಲೆ ಹೆಂಡತಿ ವೈಶಾಲಿ ಪಾಟೀಲ್ ಸುಡುವ ಎಣ್ಣೆ ಸುರಿದು ಕೊಲೆ ಮಾಡಲು‌ ಯತ್ನಿಸಿದ್ದಾಳೆ. ಗಂಡ ಸುಭಾಷ್ ಪಾಟೀಲ್ ಗೆ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ವೈಶಾಲಿ ಗಂಡ ಸುಭಾಷ್‌ ಸಿಲಿಂಡ‌ರ್ ವಿತರಣೆ ಕೆಲಸ ಮಾಡುತ್ತಿದ್ದ ಹೆಂಡತಿ ವೈಶಾಲಿಗೆ ಗಂಡನ ಮೇಲೆ ಸಂಶಯ ಬಂದು ತನ್ನ ಗಂಡ ಬೇರೆ ಮಹಿಳೆ ಜೊತೆ ಅನೈತಿಕ ಸಂಬಂಧ ಹೊಂದಿರುವ ಶಂಕೆ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮನೆಗೆ ಬಂದ ಗಂಡನ ಮೇಲೆ ಸುಡುವ ಎಣ್ಣೆ ಸುರಿದಿದ್ದಾಳೆ.

ಗಾಯಾಳು ಸುಭಾಷ್ ನನ್ನು ಚಕಿತ್ಸೆಗೆ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.