ಬೆಳಗಾವಿ : ಮಹಾನಗರ ಪಾಲಿಕೆಯ ಕಚೇರಿ ಆವರಣದಲ್ಲಿ ದಿಢೀರ್ ಬಾಂಬ್ ಬೆದರಿಕೆ ಇ-ಮೇಲ್ ಬಂದ ಹಿನ್ನೆಲೆಯಲ್ಲಿ (Breaking) ತೀವ್ರ ಆತಂಕ ಹಾಗೂ (Bomb Threat) ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಅಪರಿಚಿತ ವ್ಯಕ್ತಿಯೊಬ್ಬರು ಮಹಾನಗರ ಪಾಲಿಕೆಯ ಅಧಿಕೃತ ಇ-ಮೇಲ್ ವಿಳಾಸಕ್ಕೆ ಸಂದೇಶ ರವಾನಿಸಿದ್ದು, ಪಾಲಿಕೆಯ ಕೌನ್ಸಿಲ್ ಸಭಾಂಗಣದಲ್ಲಿ ಬಾಂಬ್ ಇಡಲಾಗಿದೆ ಎಂದು ಬೆದರಿಕೆ ಹಾಕಿದ್ದರು. ಇ-ಮೇಲ್ ಸಂದೇಶವನ್ನು ಗಮನಿಸಿದ ತಕ್ಷಣವೇ ಎಚ್ಚೆತ್ತ ಪಾಲಿಕೆ ಅಧಿಕಾರಿಗಳು ಬೆಳಗಾವಿ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಧಾವಿಸಿದ ಪೊಲೀಸ್ ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯ ದಳ ಇ-ಮೇಲ್ ಬೆದರಿಕೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಮಹಾನಗರ ಪಾಲಿಕೆ ಆವರಣಕ್ಕೆ ಭೇಟಿ ನೀಡಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡರು. ತಕ್ಷಣವೇ ಸ್ಥಳಕ್ಕೆ ಶ್ವಾನದಳ (Dog Squad) ಹಾಗೂ ಬಾಂಬ್ ನಿಷ್ಕ್ರಿಯ ದಳವನ್ನು (BDDS) ಕರೆಸಲಾಯಿತು.

ಪಾಲಿಕೆಯ ಕಾನೂನು ಸಬಾಂಗಣ, ಅಧಿಕಾರಿಗಳ ಕೊಠಡಿಗಳು, ದಾಖಲೆಗಳ ವಿಭಾಗ ಹಾಗೂ ಇದೇ ಆವರಣದ ವಿವಿಧ ಸೂಕ್ತ ಪ್ರದೇಶಗಳಲ್ಲಿ ಶೋಧ ಕಾರ್ಯ ತೀವ್ರಗೊಳಿಸಲಾಗಿದೆ. ಪೊಲೀಸರೂ ಹಾಗೂ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಯಾವುದೇ ರೀತಿಯ ರೀತಿಯ ನಿಲುಕು ವಹಿಸದೆ ಪ್ರತಿಯೊಂದು ಮೂಲೆಯನ್ನೂ ತೀವ್ರ ಪರಿಶೀಲನೆಗೆ ಒಳಪಡಿಸಿದರು.

ಅಪರಿಚಿತ ಮೂಲದಿಂದ ಬಂದ ಈ ದಿಢೀರ್ ಇ-ಮೇಲ್ ಬೆದರಿಕೆಯ ಹಿನ್ನೆಲೆಯಲ್ಲಿ ಪಾಲಿಕೆ ಕಚೇರಿಯಲ್ಲಿದ್ದ ಸಿಬ್ಬಂದಿ, ಜನಪ್ರತಿನಿಧಿಗಳು ಹಾಗೂ ತಮ್ಮ ಕೆಲಸದ ಕಾರ್ಯಗಳಲ್ಲಿ ತೊಡಗಿದ್ದ ನೂರಾರು ಸಾರ್ವಜನಿಕರಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ.

ತಪಾಸಣೆ ವೇಳೆ ಅಧಿಕಾರಿಗಳು ಮತ್ತು ಸಸಾರ್ವಜನಿಕರನ್ನು ಕೌನ್ಸಿಲ್ ಸಭಾಂಗಣದ ಸುತ್ತಮುತ್ತಲಿನ ಪ್ರದೇಶದಿಂದ ದೂರ ಸರಿಸಿ, ಪರಿಸ್ಥಿತಿ ನಿಯಂತ್ರಣಕ್ಕೆ ತಂದರು. ಈ ಸಂದೇಶವು ನಿಜವಾದ ಭದ್ರತಾ ಬೆದರಿಕೆಯೇ ಅಥವಾ ಯಾರಾದರೂ ಸಾರ್ವಜನಿಕರಲ್ಲಿ ಭಯ ಹುಟ್ಟಿಸುವ ದುರುದ್ದೇಶದಿಂದ ನಡೆಸಿದ ಫೇಕ್ ಬೆದರಿಕೆಯೇ ಎಂಬುದು ಪೊಲೀಸ್ ಪರಿಶೀಲನೆಯ ನಂತರ ಸ್ಪಷ್ಟವಾಗಲಿದೆ.