
ಏ.16 ರಂದು ಬೆಳಗಾವಿಗೆ ಭಾಸ್ಕರ್ ರಾವ್

ಬೆಳಗಾವಿ : ಕರ್ನಾಟಕ ಆಮ್ ಆದ್ಮಿ ಮುಖಂಡ, ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಏ.16 ರಂದು ಬೆಳಗಾವಿಗೆ ಆಗಮಿಸಲಿದ್ದಾರೆ.
ಆಮ್ ಆದ್ಮಿ ಸೇರ್ಪಡೆಗೊಂಡ ಬಳಿಕ ರಾಜ್ಯದ ಜನರಿಗೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರ ವಿರುದ್ಧ ಹೋರಾಟ ಹಾಗೂ ಆಮ್ ಆದ್ಮಿ ಪಕ್ಷದ ಸಂಘಟನೆಯ ಸಲುವಾಗಿ ಉತ್ತರ ಕರ್ನಾಟಕ ಪ್ರವಾಸ ಕೈಗೊಂಡಿರುವ ಅವರು, ಬೆಳಗಾವಿಯಲ್ಲಿ ಆಪ್ ಕಾರ್ಯಕರ್ತರ ಸಮಾವೇಶವನ್ನು ನಗರದ ಗೋವಾವೆಸ್ ಬಳಿ ಇರುವ ಮರಾಠಾ ಮಂದಿರ ನಡೆಸಲಿದ್ದಾರೆ ಎಂದು ಉತ್ತರ ವಲಯ ಉಸ್ತುವಾರಿ ರಾಜಕುಮಾರ ಟೋಪಣ್ಣವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.