ಬೆಳಗಾವಿ : ರಾಜಕಾರಣಗಳು ಮತದಾರರ ಹೃದಯ ಕದ್ದರೆ‌ ಮುಗಿಯಿತು ಗೆಲುವು ಅನಾಯಾಸವಾಗಿ ಬೆನ್ನು ಬಿಳುತ್ತೇ. ಅದೇ ಸಾಲಿನಲ್ಲಿ ಈಗ ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಸೇರಿದ್ದಾರೆ.

ಡಿಸಿಸಿ ನಿರ್ದೇಶಕ ಸ್ಥಾನ ಗೆಲ್ಲಲು ಅನೇಕ ಕ್ಷೇತ್ರದ ಅಭ್ಯರ್ಥಿಗಳು ತಲೆ ಬಿಸಿ ಮಾಡಿಕೊಂಡಿದ್ದರೆ ನಿಪ್ಪಾಣಿ ಕ್ಷೇತ್ರದ ಅಭ್ಯರ್ಥಿ ಶ್ರೀ ಅಣ್ಣಾ ಸಾಹೇಬ್ ಜೊಲ್ಲೆ ಮತದಾರರ ಹೃದಯ ಕದ್ದು ಜಾಲಿ ಮೂಡಲ್ಲಿದ್ದಾರೆ.

ನಿಪ್ಪಾಣಿ ಕ್ಷೇತ್ರದ ಪಿಕೆಪಿಎಸ್ ಸದಸ್ಯ ಮತದಾರರ ಜೊತೆ ಟೂರ್ ತೆರಳಿರುವ ಸಹಕಾರ ರತ್ನ ಅಣ್ಣಾಸಾಹೇಬ್ ಜೊಲ್ಲೆ ಅವರು ಹಾಡಿಗೆ ಕುಣಿದು ಕುಪ್ಪಳಿಸಿರುವ ವೀಡಿಯೋ ಸಧ್ಯ ವೈರಲ್ ಆಗಿದೆ.

ಹೃದಯ ಕದ್ದ ಮತದಾರರು ಅಕ್ಟೋಬರ್ 19 ಕ್ಕೆ ನೇರವಾಗಿ ಬೆಳಗಾವಿ ಡಿಸಿಸಿ ಬ್ಯಾಂಕ್ ಕೇಂದ್ರ ಕಚೇರಿಗೆ ಬಂದು ಮತದಾನ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಮತದಾರರ ಹೃದಯ ಕಲ್ಲಾಗಿ ಅರಳಿದರೆ ಸಹಕಾರಿ ರತ್ನ ಮತ್ತೆ ಮರಳಿ ಯತ್ನವ ಮಾಡು ಪರಿಸ್ಥಿತಿಗೆ ಬಂದರೂ ಅಚ್ಚರಿಯಿಲ್ಲ.