ಎ ಕಿಡ್ಸ್ ಫ್ರೀ ಸ್ಕೋಲ್ ನಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ
ಬೆಂಗಳೂರು : ಕನ್ನಡ ಭಾಷೆ ಕೋಟ್ಯಾಂತರ ಜನರ ಬದುಕಿಗೆ ದಾರಿದೀಪವಾಗಿದೆ. ಹಲವರು ಕರ್ನಾಟಕ ಏಕೀಕರಣದ ಹೋರಾಟದ ಮೂಲಕ ಈ ನಾಡಿಗೆ ತಮ್ಮ ಬದುಕು ಮೀಸಲಿಟ್ಟವರನ್ನು ನೆನೆಯುವುದೇ ಈ ದಿನದ ವಿಶೇಷ ಎಂದು
ಎ ಕಿಡ್ಸ್ ಫ್ರೀ ಸ್ಕೋಲ್ ಪ್ರಾಂಶುಪಾಲರಾದ ಜೆ.ಎಸ್ ಸಂತೋಷ್ ಅಭಿಪ್ರಾಯಪಟ್ಟರು.
ನಗರದ ಅತ್ತಿಬೆಲೆಯಲ್ಲಿರುವ ಎ ಕಿಡ್ಸ್ ಫ್ರೀ ಸ್ಕೋಲ್ ನಲ್ಲಿ ನವೆಂಬರ್ 1 ಕನ್ನಡ ರಾಜ್ಯೋತ್ಸವ ಹಿನ್ನಲೆಯಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕರ್ನಾಟಕ ರಾಜ್ಯದ ನಕ್ಷೆ ಬಿಡಿಸಿ ಅದರಲ್ಲಿ ಪ್ರತಿ ಜಿಲ್ಲೆಯಲ್ಲಿನ ವಿಶೇಷತೆಗಳ ಕುರಿತು ಮಕ್ಕಳಿಗೆ ತಿಳುವಳಿಕೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜೆ.ಎಸ್ ಸಂತೋಷ್ ಅವರು. ನಮ್ಮ ಕರುನಾಡಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಮಕ್ಕಳಿಗೆ ಬಾಲ್ಯದಲ್ಲೇ ನಮ್ಮ ರಾಜ್ಯದ ವಿಶೇಷತೆಗಳ ಕುರಿತು ಚಿತ್ರದ ಮೂಲಕ ತಿಳಿಸುವ ಪ್ರಯತ್ನ ಮಾಡಲಾಗಿದೆ. ಆಯಾ ಜಿಲ್ಲೆ ವಿಶೇಷತೆಗಳಂತೆ ಆ ವಸ್ತುವನ್ನು ಇಟ್ಟು ಪ್ರದರ್ಶನ ಮಾಡಲಾಗಿದೆ ಎಂದು ತಿಳಿಸಿದರು.
ರಾಜ್ಯದ ಎಲ್ಲಾ ಜಿಲ್ಲೆಗಳ ವಿಶೇಷ ಬೆಳೆ ಹಾಗೂ ಪ್ರಸಿದ್ಧ ವಸ್ತುಗಳ ಕುರಿತು ಕರ್ನಾಟಕ ನಕ್ಷೆಯಲ್ಲಿ ವಸ್ತುಗಳನ್ನು ಇಟ್ಟು ಮಕ್ಕಳಿಗೆ ತೋರಿಸಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಆಡಳಿತ ಮಂಡಳಿ ಸದಸ್ಯರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.