ರಾಯಬಾಗ : ಎರಡು ವರ್ಷದ ಮಗುವನ್ನು ಕೊಲೆ ಮಾಡಿದ್ನಾ ತಂದೆ…?
ಮಗು ಕಾಲಿಗೆ ಬಟ್ಟೆಕಟ್ಟಿ ಕೊಳವೆ ಬಾವಿಗೆ ಬಿಟ್ಟವರು ಯಾರು..?
ರಾಯಬಾಗ : ತಾಲೂಕಿನ ಅಲಕನೂರು ಗ್ರಾಮದಲ್ಲಿ ಕೊಳವೆ ಬಾವಿಗೆ ಮಗು ಬಿದ್ದ ಪ್ರಕರಣ ಬೇರೆ ತಿರುವು ಪಡೆದುಕೊಂಡಿದ್ದು ಮಗು ಕಾಲಿಗೆ ಬಟ್ಟೆ ಕಟ್ಟಿ ಕೊಳವೆ ಬಾವಿಗೆ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.
ಶುಕ್ರವಾರ ಬಾಲಕನ ತಂದೆ ಸಿದ್ದಪ್ಪ ಹಸರೆ ಎಂಬುವವರು ತಮ್ಮ ಮಗು ನಾಪತ್ತೆಯಾಗಿದೆ ಎಂದು ಹಾರೂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಆದರೆ ಶನಿವಾರ ಸಂಜೆ ಮಗು ಕೊಳವೆ ಬಾವಿಯಲ್ಲಿ ಬಿದ್ದಿರುವುದು ಖಚಿತವಾಗಿದೆ.
ಕೊಳವೆ ಬಾವಿಯಲ್ಲಿ ಮಗು ಬಿದ್ದ ಸುದ್ದಿ ತಿಳಿಯುತ್ತಿದ್ದಂತೆ ಹಾರೂಗೇರಿ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಕಾರ್ಯಾಚರಣೆ ನಡೆಸಿ 2 ವರ್ಷದ ಮಗು ಶರತ್ ಮೃತದೇಹ ಹೊರತಗೆದಿದ್ದಾರೆ.
ಮಗುವಿನ ತಾಯಿ ಹಾಗೂ ಅಜ್ಜಿ ಆರೋಪ :
ಸತ್ತ ಮಗುವನ್ನು ಅವರ ತಂದೆ ಸೇರುತ್ತಿರಲಿಲ್ಲ,
ಮನೆಯಲ್ಲಿ ಯಾರು ಇರದ ಸಂದರ್ಭದಲ್ಲಿ ಮಗುವಿನ ತಂದೆ ಎರಡು ವರ್ಷ ಪುಟ್ಟ ಮಗುವಿನ ಕಾಲಿಗೆ ಬಟ್ಟೆ ಕಟ್ಟಿ ಬಾವಿಗೆ ಬಿಟ್ಟು ಕೊಲೆ ಮಾಡಿದ್ದಾನೆ ಎಂದು ಮಗುವಿನ ಅಜ್ಜಿ ಆರೋಪಿಸಿದ್ದಾರೆ.