BIG BREAKING – ಕೊಳವೆ ಬಾವಿಗೆ ಬಿದ್ದ 2 ವರ್ಷದ ಮಗು : ರಾಯಬಾಗ ತಾಲೂಕಿನ ಅಲಖನೂರ ಗ್ರಾಮದಲ್ಲಿ ಘಟನೆ
ಚಿಕ್ಕೋಡಿ : ಕಳೆದ ಎರಡು ದಿನಗಳಿಂದ ರಾಯಬಾಗ ತಾಲೂಕಿನ ಅಲಕನೂರ ಗ್ರಾಮದ ಮನೆ ಮುಂದೆ ಆಟವಾಡುತ್ತಿದ್ದಾಗ ನಾಪತ್ತೆಯಾಗಿದ್ದ ಎರಡು ವರ್ಷದ ಮಗು ಕೊಳವೆ ಬಾವಿಯಲ್ಲಿ ಬಿದ್ದಿರುವ ಘಟನೆ ನಡೆದಿದೆ.
ಶುಕ್ರವಾರ ಬಾಲಕನ ತಂದೆ ಸಿದ್ದಪ್ಪ ಹಸರೆ ಎಂಬುವವರು ತಮ್ಮ ಮಗು ನಾಪತ್ತೆಯಾಗಿದೆ ಎಂದು ಹಾರೂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಆದರೆ ಶನಿವಾರ ಸಂಜೆ ಮಗು ಕೊಳವೆ ಬಾವಿಯಲ್ಲಿ ಬಿದ್ದಿರುವುದು ಖಚಿತವಾಗಿದೆ.
ಶರತ್ ಹೆಸರಿನ ಎರಡು ವರ್ಷದ ಪುಟ್ಟ ಬಾಲಕ ಕೊಳವೆ ಬಾವಿಯಲ್ಲಿ ಬಿದ್ದಿದ್ದು ಮಗು ರಕ್ಷಣೆಗೆ ಹಾರೂಗೇರಿ ಪಟ್ಟಣದಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ.